ಪುತ್ತೂರು: ಮುರದಲ್ಲಿ ಸರಣಿ ಕಳ್ಳತನ: ನಗದು, ಸೊತ್ತುಗಳ ಕಳವು
ಪುತ್ತೂರು: ಮುರ ಮಾಧವ ಕಾಂಪ್ಲೆಕ್ಸ್ ನಲ್ಲಿರುವ ಧರಿತ್ರಿ ಸೌಹಾರ್ದ ಸಹಕಾರಿ ಸಂಸ್ಥೆ ಮತ್ತು ಪಕ್ಕದಲ್ಲಿರುವ ಮಹಾಲಿಂಗೇಶ್ವರ ಇಲೆಕ್ಟ್ರಿಕ್ ಅಂಗಡಿಗೆ ನುಗ್ಗಿದ ಕಳ್ಳರು ನಗದು, ಸೊತ್ತುಗಳನ್ನು ಕಳವು ಮಾಡಿದ ಘಟನೆ ಫೆ.2ರಂದು ಬೆಳಕಿಗೆ ಬಂದಿದೆ.
ಧರಿತ್ರಿ ಸೌಹಾರ್ದ ಸಹಕಾರಿ ಸಂಸ್ಥೆಯ ರೋಲಿಂಗ್ ಶೆಟರ್ ಬೀಗ ಒಡೆದು ಒಳನುಗ್ಗಿದ ಕಳ್ಳರು ಸುಮಾರು ರೂ.34,750 ನಗದು, ಕಂಪೆನಿಯ ಲ್ಯಾಪ್ಟಾಪ್, ಕಂಪ್ಯೂಟರ್, ಇನ್ ವರ್ಟರ್, ಸಿಸಿ ಕ್ಯಾಮರಾ ಡಿವಿಆರ್ ಕಳವುಗೈದಿದ್ದಾರೆ.
ಪಕ್ಕದಲ್ಲಿರುವ ಕೆದಿಲದ ಸಂದೀಪ್ ಎಂಬವರ ಮಾಲಕತ್ವದ ಇಲೆಕ್ಟಿಕ್ ಅಂಗಡಿಗೂ ನುಗ್ಗಿದ ಕಳ್ಳರು ದುರಸ್ತಿಗೆಂದು ಅಲ್ಲಿಗೆ ತಂದಿಡಲಾಗಿದ್ದ 10 ಸೀಲಿಂಗ್ ಫ್ಯಾನ್, 4 ಮಿಕ್ಸರ್ ಜಾರ್ಗಳನ್ನು ಕಳವು
ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಧರಿತ್ರಿ ಸೌಹಾರ್ದ ಸಹಕಾರಿ ಸಂಸ್ಥೆಯ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಕಾವ್ಯ ಅವರು ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ.