ಬಿಗ್ ಬಾಸ್ ಕನ್ನಡ ಸೀಸನ್-12, ಗಿಲ್ಲಿ ವಿನ್ನರ್ಸ್, ರಕ್ಷಿತಾ ಶೆಟ್ಟಿ ರನ್ನರ್ ಅಪ್
ಬೆಂಗಳೂರು: ತೀವ್ರ ಕುತೂಹಲ ಮೂಡಿಸಿದ್ದ ದೊಡ್ಮನೆಯ ಆಟಕ್ಕೆ ಜ.18ರಂದು ರಾತ್ರಿ ತೆರೆ ಬಿದಿದ್ದು, ಗಿಲ್ಲಿ ನಟರಾಜ್ ಈ ಬಾರಿಯ‘ಬಿಗ್ ಬಾಸ್ ಕನ್ನಡ 12’ ವಿನ್ನರ್ ಆಗಿದ್ದು, ಕರಾವಳಿಯ ವೈರಲ್ ಸ್ಟಾರ್ ರಕ್ಷಿತಾ ಶೆಟ್ಟಿ ರನ್ನರ್ ಅಪ್ ಆಗಿದ್ದಾರೆ. ಅಶ್ವಿನಿ ಗೌಡ ಅವರು ಎರಡನೇ ರನ್ನರ್ ಅಪ್ ಆಗಿದ್ದಾರೆ.

ಬಿಗ್‌ಬಾಸ್ ಸೀಸನ್ 12 ಗೆದ್ದ ಗಿಲ್ಲಿಗೆ 50 ಲಕ್ಷ ರೂ. ಕ್ಯಾಶ್ ಪ್ರೈಸ್ ಜೊತೆ ಭರ್ಜರಿ ಗಿಫ್ಟ್ ಕೂಡ ಸಿಕ್ಕಿದೆ. ನಗದು ಬಹುಮಾನದ ಜೊತೆ ಕಾರು ಕೂಡ ಉಡುಗೊರೆಯಾಗಿ ನೀಡಲಾಗಿದೆ.
ಈ ಬಾರಿಯ ಸೀಸನ್ ಭಾರೀ ಸದ್ದು ಮಾಡಿತ್ತು. ಕಳೆದೆಲ್ಲಾ ಸೀಸನ್‌ಗಳಿಗಿಂತ ಈ ಸೀಸನ್ ಕಂಟೆಸ್ಟೆಂಟ್‌ಗೆ ಹೆಚ್ಚಿನ ಜನ ಬೆಂಬಲ ಸಿಕ್ಕಿತ್ತು.




