ಬೆಳ್ಳಾರೆ: ಮಸೂದ್ ಕೊಲೆ ಪ್ರಕರಣ: ನಾಲ್ಕನೇ ಆರೋಪಿಗೆ ಜಾಮೀನು
ಬೆಳ್ಳಾರೆ ಸಮೀಪದ ಕಳಂಜದಲ್ಲಿ 2022 ಜು.19 ರಂದು ಮಸೂದ್ ಎಂಬ ಯುವಕನ ಕೊಲೆ ಆರೋಪದಲ್ಲಿ ಬಂಧಿತರಾಗಿ ಜೈಲಿನಲ್ಲಿರುವವರಲ್ಲಿ ನಾಲ್ಕನೇ ಆರೋಪಿ ಶಿವಪ್ರಸಾದ್ ಕಳಂಜ ಗೆ ಜಾಮೀನು ದೊರೆತಿದೆ ಎಂದು ತಿಳಿದುಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿ ಎಂಟು ಮಂದಿ ಆರೋಪಿಗಳು ಜೈಲಿನಲ್ಲಿದ್ದರು. ಅವರಲ್ಲಿ ಇಬ್ಬರಿಗೆ ಕೆಲದಿನಗಳ ಹಿಂದೆ ಹೈಕೋರ್ಟ್ ಜಾಮೀನು ನೀಡಿತ್ತು. ಇಂದು ನಾಲ್ಕನೇ ಆರೋಪಿ ಶಿವಪ್ರಸಾದ್ ಗೆ ಹೈಕೊರ್ಟ್ ಜಾಮೀನು ನೀಡಿರುವುದಾಗಿ ತಿಳಿದು ಬಂದಿದೆ.