ಕರಾವಳಿಕ್ರೈಂ

ಪುತ್ತೂರು: ಅಮ್ಚಿನಡ್ಕದಲ್ಲಿ ಅಡಿಕೆ, ಹುಲ್ಲು ತೆಗೆಯುವ ಮೆಷಿನ್ ಕಳ್ಳತನ: ಇಬ್ಬರ ಬಂಧನಪುತ್ತೂರು: ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕಾವು ಅಮ್ಚಿನಡ್ಕ ನಿವಾಸಿ ಕಿರಣ್ ಕುಮಾರ್, ಕಾವು ಅಮ್ಚಿನಡ್ಕ ನಿವಾಸಿ ಸಂತೋಷ್ ಬಂಧಿತ ಆರೋಪಿಗಳು.

ಪುತ್ತೂರು ತಾಲೂಕು ಮಾಡ್ನೂರು ಗ್ರಾಮದ ಅಮ್ಚಿನಡ್ಕ ಎಂಬಲ್ಲಿರುವ ವಿಷ್ಣು ಕಲ್ಲುರಾಯ ರವರ ಮನೆಯ
ಉಗ್ರಾಣದಲ್ಲಿ ಶೇಖರಿಸಿಟ್ಟಿದ್ದ 10 ಪ್ಲಾಸ್ಟಿಕ್ ಗೋಣಿ ಚೀಲದಲ್ಲಿ ತುಂಬಿಸಿದ್ದ ಸುಮಾರು 2 ಕ್ವಿಂಟಾಲ್ ಸುಲಿಯದ ಒಣ ಅಡಿಕೆಯನ್ನು ಮತ್ತು ಹುಲ್ಲು ತೆಗಿಯುವ ಮೇಷಿನ್ ಕಳವು ಮಾಡಿಕೊಂಡು ಹೋಗಿದ್ದು, ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು

ಆರೋಪಿಗಳನ್ನು ಬಂಧಿಸಿ ಸುಮಾರು ರೂ 51,000/- ಮೌಲ್ಯದ 1 ಕಿಂಟ್ವಾಲ್ 20 ಕೆಜಿ ಸುಲಿದ ಅಡಿಕೆ ಮತ್ತು ಸುಮಾರು ರೂ 5,000/-ಮೌಲ್ಯದ ಹುಲ್ಲು ತೆಗಿಯುವ ಮೇಷಿನ್ ಹಾಗೂ ಕಳವು ಮಾಡಲು ಉಪಯೋಗಿಸಿದ ಸುಮಾರು ಒಂದು ಲಕ್ಷ ಮೌಲ್ಯದ ಓಮ್ನಿ ಕಾರನ್ನು ವಶಪಡಿಸಿಕೊಂಡಿರುತ್ತಾರೆ. ಈ ಪ್ರಕರಣದ ಇನ್ನೋರ್ವ ಆರೋಪಿ ಸಿನಾನ್ ಪರಾರಿಯಾಗಿದ್ದಾನೆ.

ಈ ಪ್ರಕರಣವನ್ನು ಭೇದಿಸುವಲ್ಲಿ ಪುತ್ತೂರು ಉಪಾಧೀಕ್ಷಕರಾದ ಡಾ. ಗಾನ ಪಿ, ಕುಮಾರ್ ರವರ
ಮಾರ್ಗದರ್ಶನದಲ್ಲಿ, ಪುತ್ತೂರು ಗ್ರಾಮಾಂತರ ಠಾಣಾ ಪ್ರಭಾರ ಪೊಲೀಸ್ ನಿರೀಕ್ಷಕರಾದ ರವಿ.ಬಿ.ಎಸ್, ಪುತ್ತೂರು
ಗ್ರಾಮಾಂತರ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ಧನಂಜಯ ಬಿ.ಸಿ, ಎಎಸ್‌ಐ ಮುರುಗೇಶ್, ಸಿಬ್ಬಂದಿಗಳಾದ
ಬಾಲಕೃಷ್ಣ, ಅದ್ರಾಮ ಪ್ರವೀಣ್ ರೈ, ಲೋಕೇಶ್, ಜಗದೀಶ್, ಮುನಿಯ ನಾಯ್ಕ, ಚಾಲಕರಾದ ಯೋಗೀಶ್ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!