ಮಣಿಪುರ ಘಟನೆ ಖಂಡಿಸಿ ಸುಳ್ಯದಲ್ಲಿ ಕ್ರೈಸ್ತ ಬಂಧವರಿಂದ ಪ್ರತಿಭಟನೆ
ಸುಳ್ಯ: ಮಣಿಪುರದಲ್ಲಿ ಚರ್ಚ್‌ಗಳ ಮೇಲೆ, ಹಾಗೂ ಕ್ರೈಸ್ತ ಧರ್ಮೀಯರ ಮೇಲೆ ನಡೆಯುತ್ತಿರುವ ದಾಳಿ, ದೌರ್ಜನ್ಯ ಕೃತ್ಯಗಳನ್ನು ನಿಯಂತ್ರಿಸುವಲ್ಲಿ ಮಣಿಪುರ ಸರಕಾರ ಹಾಗು ಕೇಂದ್ರ ಸರಕಾರ ವಿಫಲವಾಗಿದೆ ಎಂದು ಆರೋಪಿಸಿ ಮತ್ತು ಮಣಿಪುರ ಸರಕಾರವನ್ನು ಕೂಡಲೇ ವಜಾಗೊಳಿಸುವಂತಗೆ ಒತ್ತಾಯಿಸಿ ಕ್ರೈಸ್ತ ಸಮುದಾಯದ ವತಿಯಿಂದ ಆ.3ರಂದು ಸುಳ್ಯದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು.

ಸುಳ್ಯದ ಮುಖ್ಯ ರಸ್ತೆಯಲ್ಲಿ ಸಾಗಿದ ಪ್ರತಿಭಟನಾ ಮೆರವಣಿಗೆ ಸುಳ್ಯ ತಾಲೂಕು ಕಚೇರಿ ಬಳಿ ಸಮಾವೇಶಗೊಂಡಿತು. ವಿವಿಧ ಚರ್ಚ್‌ಗಳ ಧರ್ಮ ಗುರುಗಳು ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು. ಪ್ರತಿಭಟನೆ ಬಳಿಕ ತಹಸೀಲ್ದಾರ್ ಮೂಲಕ ಮನವಿ ಸಲ್ಲಿಸಲಾಯಿತು.