ಹಠಾತ್ ಹೃದಯಾಘಾತ ತಪ್ಪಿಸಲು ಯೋಜನೆ ರೂಪಿಸಿದ ಸರಕಾರ: ಪುನೀತ್ ಸ್ಮರಣಾರ್ಥ ಹೊಸ ಯೋಜನೆ ಜಾರಿಗೆ
ಪುತ್ತೂರು: ಹೃದಯಾಘಾತ ತಡೆಗಟ್ಟಲು ಸ್ವಯಂಚಾಲಿತ ಎಲೆಕ್ಟ್ರಾನಿಕ್ ಡಿಫಿಬ್ರಿಲೇಟರ್ (Automated External Defibrillators) ಮಷಿನ್ ಗಳು ಬಹಳ ಯಪಯೋಗಕಾರಿಯಾಗಿದ್ದು ಹೃದಯಾಘಾತ ಆಗುವ ಸಾಧ್ಯತೆಗಳಿದ್ದರೆ ಈ ಯಂತ್ರ ಅದನ್ನು ಮೊದಲೇ ಗುರುತಿಸುತ್ತದೆ. ಪುನೀತ್ ರಾಜ್‌ಕುಮಾರ್ ಅವರ ಸ್ಮರಣಾರ್ಥವಾಗಿ ಹಠಾತ್ ಹೃದಯ ಸಂಬಂಧಿ ಸಾವುಗಳನ್ನು ತಡೆಗಟ್ಟಲು AED ಮಷಿನ್ಗಳನ್ನು ಜಿಲ್ಲಾಸ್ಪತ್ರೆ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ಅಳವಡಿಸಲು ಸರ್ಕಾರ ಮುಂದಾಗಿದೆ. ಇದಕ್ಕಾಗಿ ಆರು ಕೋಟಿ ರೂ. ಅನುದಾನ ಒದಗಿಸಲಾಗುವುದು ಎಂದು ಬಜೆಟ್ ನಲ್ಲಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.

ಪುನೀತ್ ರಾಜ್ಕುಮಾರ್ ಅವರು 2021ರ ಅಕ್ಟೋಬರ್ ತಿಂಗಳಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದರು. ಅವರ ಮರಣಾ ನಂತರ ಹೃದಯಾಘಾತದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಅನೇಕರಿಂದ ಆಗಿದೆ. ಕಾಂಗ್ರೆಸ್ ಸರ್ಕಾರ ಕೂಡ ಈ ನಿಟ್ಟಿನಲ್ಲಿಹೊಸ ಯೋಜನೆ ತರುತ್ತಿದ್ದು, ಪುನೀತ್ ರಾಜ್ಕುಮಾರ್ ಸ್ಮರಾಣರ್ಥವಾಗಿ ಈ ಕೆಲಸ ಆಗುತ್ತಿದೆ.