ಧರೆ ಕುಸಿದರೂ ಪರಿಹಾರ ಕೊಡಿ ಸಾರ್: ಸಿಎಂ ಸಿದ್ದರಾಮಯ್ಯ ಬಳಿ ಪುತ್ತೂರು ಶಾಸಕ ಅಶೋಕ್ ರೈ ಮನವಿ
ಪುತ್ತೂರು: ಮಳೆಗೆ ಮನೆ ಪೂರ್ಣ ಬಿದ್ದರೆ’,ಭಾಗಶ ಹಾನಿಯಾದರೆ ಪರಿಹಾರ ಕೊಡಲಾಗುತ್ತದೆ ಅದೇ ರೀತಿ ಮನೆಯ ಸುತ್ತ ಇರುವ ಧರೆ ಕುಸಿದು ಬಿದ್ದರೆ ಆ ಮಣ್ಣು ತೆಗೆಯಲುಕನಿಷ್ಟ 50 ಸಾವಿರವಾದರೂ ಪರಿಹಾರ ಕೊಡಬೇಕು ಎಂದು ಸಿಎಂ ಸಿದ್ದರಾಮಯ್ಯ ಬಳಿ ಶಾಸಕ ಅಶೋಕ್ ಕುಮಾರ್ ರೈ ಮನವಿ ಮಾಡಿದರು.
ಬಡವರ ಮನೆಗಳಲ್ಲೇ ಇಂಥಃ ಅನಾಹುತ ಆಗುತ್ತಿದೆ. ಮನೆ ಕಟ್ಟಲು ಜಾಗ ಇಲ್ಲದ ಕಾರಣ ಧರೆ ಬದಿಯಲ್ಲಿ ಮನೆ ಕಟ್ಟುತ್ತಾರೆ. ಧರೆ ಮಳೆಗೆ ಬೀಳ್ತದೆ. ಬಡವರು ಸಾರ್….. ಅವರು ಮನೆ ಕಟ್ಟುವುದೇ ಕಷ್ಟದಲ್ಲಿ ದಯವಿಟ್ಟು ಇಂಥಹ ಘಟನೆ ನಡೆದಲ್ಲಿ ಪರಿಹಾರ ಕೊಡಿ ಸಾರ್ ಎಂದು ಸಿಎಂ ಬಳಿ ಶಾಸಕರು ಮನವಿ ಮಾಡಿದರು.
ಕೆಡಿಪಿ ಸಭೆಯಲ್ಲಿ ಶಾಸಕರು ಈ ಆಗ್ರಹ ಮಾಡಿದರು.