ಕರಾವಳಿ

ಉಪ್ಪಿನಂಗಡಿ ತಡೆಗೋಡೆ ಕುಸಿದ ಘಟನೆ
ದುರಸ್ಥಿ ಮಾಡಿ ಎಂದು ನಮಗೆ ಯಾರೂ ಕರೆ ಮಾಡಿಯೇ ಇಲ್ಲ: ಹೈವೇ ಇಂಜಿನಿಯರ್ ಸ್ಪಷ್ಟನೆ



ಪುತ್ತೂರು: ಭಾರೀ ಮಳೆಗೆ ಕಳೆದ ಕೆಲವು ದಿನಗಳ ಹಿಂದೆ ಉಪ್ಪಿನಂಗಡಿಯ ನಟ್ಟಿಬೈಲ್ ಎಂಬಲ್ಲಿ ಹೈವೇ ಬದಿಯಲ್ಲಿ ರಸ್ತೆ ಅಗಲೀಕರಣದ ವೇಳೆ ನಿರ್ಮಾಣ ಮಾಡಿದ್ದ ತಡೆಗೋಡೆ ಕುಸಿದು ಬಿದ್ದು ಪಕ್ಕದ ತೋಟದಲ್ಲಿ ನೀರು ನಿಂತು ಕೃಷಿಗೆ ತೊಂದರೆ ಉಂಟಾಗಿತ್ತು. ನಮ್ಮ ಇಲಾಖೆಯ ವತಿಯಿಂದ ಘಟನಾ ಸ್ಥಳದಲ್ಲಿ ಬಿದ್ದ ಮಣ್ಣು ತೆಗೆಯುವ ಮೂಲಕ ತೋಟಕ್ಕೆ ಬಿದ್ದ ಮಣ್ಣು ತೆರವು ಮಾಡಿದ್ದು ಮಣ್ಣು ತೆಗೆಯಬೇಕೆಂದು ನಮಗೆ ಯಾರೂ ಕರೆ ಮಾಡಿಲ್ಲ, ಪ್ರತಿಭಟನೆ ನಡೆಸುವುದಾಗಿಯೂ ಹೇಳಿಯೇ ಇಲ್ಲ ಎಂದು ಹೈವೇ ಇಂಜಿನಿಯರ್ ಲಿಖಿತ್ ಮಾಹಿತಿ ನೀಡಿದ್ದಾರೆ.

ಘಟನೆ‌ ನಡೆದ ಮಾರನೇ ದಿನ ಪುತ್ತೂರು ಶಾಸಕರಾದ ಅಶೋಕ್ ರೈ ಸ್ಥಳಕ್ಕೆ ಭೇಟಿ ನೀಡಿದಾಗ ನನಗೆ ಕರೆ ಮಾಡಿ ಕುಸಿದು ಬಿದ್ದ ತಡೆಗೋಡೆಯಿಂದ ಪಕ್ಕದ ತೋಟಕ್ಕೆ ನೀರು ಹರಿಯುತ್ತಿದ್ದು ಅಲ್ಲಿ ಮಣ್ಣು ತೆಗೆಯುವಂತೆ ಸೂಚನೆ ನೀಡಿದ್ದರು. ಮಳೆ ಕಡಿಮೆಯಾದ ಸಂದರ್ಬದಲ್ಲಿ ಮಣ್ಣು ತೆಗೆಯುವುದಾಗಿ ಶಾಸಕರಲ್ಲಿ ತಿಳಿಸಿದ್ದೆವು ಅದರಂತೆ‌ ನಮ್ಮ ಇಲಾಖೆಯ ಕಾರ್ಮಿಕರು‌ ಮಣ್ಣು ತೆಗೆಯುವ ಕೆಲಸ ಮಾಡಿದ್ದಾರೆ. ಶಾಸಕರನ್ನು ಬಿಟ್ರೆ ಬೇರೆ ಯಾರೂ ನಮಗೆ ಕರೆ ಮಾಡಿಲ್ಲ. ಯಾರೋ ಅಲ್ಲಿಗೆ ಭೇಟಿ ನಮಗೆ ಕರೆ ಮಾಡಿದ್ದಾರೆ, ಕೂಡಲೇ ಬಂದು ಮಣ್ಣು ತೆರವು ಮಾಡಿದ್ದಾರೆ ಎಂದು ಮಾಧ್ಯಮದಲ್ಲಿ ವರದಿಯಾಗಿದ್ದು ನಮ್ಮ ಗಮನಕ್ಕೆ ಬಂದಿದೆ. ಉಪ್ಪಿನಂಗಡಿ ಹೈವೇ ಇಂಜಿನಿಯರ್ ನಾನೇ ಇದ್ದು ನನಗೆ ಯಾರೊಬ್ಬರೂ ಕರೆ ಮಾಡಿ ಮಣ್ಣು ತೆಗೆಯಬೇಕೆಂದು ಹೇಳಿಯೇ ಇಲ್ಲ. ವಾರದ ಹಿಂದೆ ಶಾಸಕರು ನೀಡಿದ ಸೂಚನೆಯಂತೆ ಕಾಮಗಾರಿ ನಡೆಸಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!