ಮಲೇಶ್ಯಾ ಸರಕಾರದಿಂದ ಅತ್ಯುನ್ನತ ಪುರಸ್ಕಾರ ಪಡೆದ ಎ.ಪಿ.ಉಸ್ತಾದರಿಗೆ ಕರ್ನಾಟಕ ಸಖಾಫಿ ಕೌನ್ಸಿಲ್‌ನಿಂದ ಅಭಿನಂದನೆ
ಇತ್ತೀಚೆಗೆ ಮಲೇಶ್ಯಾ ಸರಕಾರದ ಅತ್ಯುನ್ನತ ಪ್ರಶಸ್ತಿಯಾದ ‘ಮಅಲ್ ಹಿಜ್ರಾ ಇಂಟರ್‌ನ್ಯಾಷನಲ್ ಅವಾರ್ಡ್’ ಪುರಸ್ಕೃತರಾದ ಗ್ರಾಂಡ್ ಮುಫ್ತಿ ಆಫ್ ಇಂಡಿಯಾ ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದರನ್ನು ಕರ್ನಾಟಕ ಸಖಾಫಿ ಕೌನ್ಸಿಲ್ ವತಿಯಿಂದ ಮರ್ಕಝ್ ಸಭಾಂಗಣದಲ್ಲಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ಸಖಾಫಿ ಕೌನ್ಸಿಲ್ ರಾಜ್ಯಾಧ್ಯಕ್ಷ ಪಿ.ಪಿ.ಅಹ್ಮದ್ ಸಖಾಫಿ, ಪ್ರಧಾನ ಕಾರ್ಯದರ್ಶಿ ಕೆಕೆಎಂ ಕಾಮಿಲ್ ಸಖಾಫಿ, ಕೇಂದ್ರ ಸಖಾಫಿ ಶೂರಾ ಪ್ರತಿನಿಧಿಗಳಾದ ಡಾ. ಎಮ್ಮೆಸ್ಸೆಂ ಝೈನೀ ಕಾಮಿಲ್ ಸಖಾಫಿ, ಅಬೂ ಸ್ವಾಲಿಹ್ ಸಖಾಫಿ ಪೂನೂರು, ಸಖಾಫಿ ಕೌನ್ಸಿಲ್ ರಾಜ್ಯ ಸಮಿತಿ ಪ್ರತಿನಿಧಿಗಳಾದ ಮುಹಮ್ಮದ್ ಅಲಿ ಸಖಾಫಿ ಅಶ್‌ಅರಿಯಾ,ಅಬ್ದುಸ್ಸತ್ತಾರ್ ಸಖಾಫಿ ಅಡ್ಯಾರ್ ಪದವು, ಮುಸ್ತಫಾ ಸಖಾಫಿ ಬೇಂಗಿಲ, ಅಬ್ದುಲ್ ಅಝೀಝ್ ಸಖಾಫಿ ಮಲೇಷಿಯಾ, ಅಬ್ದುಲ್ಲಾ ಸಖಾಫಿ ಕೊಡಗು, ಮಹ್ಬೂಬ್ ಸಖಾಫಿ ಕಿನ್ಯಾ, ಅಬ್ದುಸ್ಸತ್ತಾರ್ ಸಖಾಫಿ ಬೆಳ್ಳಾರೆ, ಅಬೂಬಕರ್ ಸಖಾಫಿ ಮಂಗಲಪದವು, ಇಸ್ಮಾಯಿಲ್ ಸಖಾಫಿ ಅಜಿಲಮೊಗರು,ಹನೀಫ್ ಸಖಾಫಿ ಪೇರಮೊಗರು,ಅಬ್ದುಲ್ ಅಝೀಝ್ ಸಖಾಫಿ ಪರಪ್ಪು ಮುಂತಾದವರು ಭಾಗವಹಿಸಿದರು.
ಕರ್ನಾಟಕದಲ್ಲಿ ಸಖಾಫಿಗಳ ನೇತೃತ್ವದಲ್ಲಿ ನಡೆಯುವ ವಿವಿಧ ಧಾರ್ಮಿಕ ಶೈಕ್ಷಣಿಕ ಚಟುವಟಿಕೆಗಳನ್ನು ಶ್ಲಾಘಿಸಿದ ಉಸ್ತಾದರು ಶುಭ ಹಾರೈಸಿ ಪ್ರಾರ್ಥನೆ ನಡೆಸಿದರು.