ಕರಾವಳಿ

ಜೈನಮುನಿ ಹತ್ಯೆ ಪ್ರಕರಣ: ಸಮಗ್ರ ತನಿಖೆಗೆ ಆಗ್ರಹಿಸಿ ಜೈನ ಬಾಂಧವರಿಂದ ಮನವಿ ಸಲ್ಲಿಕೆ

ಪುತ್ತೂರು: ಚಿಕ್ಕೋಡಿ ತಾಲೂಕಿನ ಹೀರೆಕೋಡಿ ಗ್ರಾಮದ ನಂದಿ ಪರ್ವತ ಆಶ್ರಮದ ಜೈನಮುನಿ ಆಚಾರ್ಯ ಶ್ರೀಕಾಮಕುಮಾರ ನಂದೀ ಮಹಾರಾಜರನ್ನು ಬರ್ಬರವಾಗಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿ ಸಮಗ್ರ ತನಿಖೆಗೆ ಆಗ್ರಹಿಸಿ ಮತ್ತು ಜೈನ ಸಮಾಜದ ಉಳಿದ ಮುನಿಗಳ/ತ್ಯಾಗಿಗಳಿಗೆ ಸೂಕ್ತ ರಕ್ಷಣೆ ಒದಗಿಸುವಂತೆ ಆಗ್ರಹಿಸಿ ಪುತ್ತೂರಿನ ಸಮಸ್ತ ಜೈನ ಬಾಂಧವರು ತಹಶೀಲ್ದಾರ್‌ರವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಅತಿವೀರ್ ಜೈನ್, ಅಶೋಕ್ ಪಡಿವಾಳ್, ನರೇಂದ್ರ ಪಡಿವಾಳ್, ಸತೀಶ್ ಪಡಿವಾಳ್, ಯಶೋಧರ್ ಜೈನ್, ರಕ್ಷಿತ್ ಜೈನ್, ಸುರೇಶ್ ಕುಮಾರ್, ಸುರೇಶ್ ಜೈನ್, ನರೇಶ್ ಜೈನ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!