ಕರಾವಳಿಕ್ರೈಂ

ಕಾವೂರು: ಜೂಜಾಟ ಅಡ್ಡೆ ಮೇಲೆ ಪೊಲೀಸ್ ದಾಳಿ, 17 ಮಂದಿಯ ಸೆರೆ



ಮಂಗಳೂರು: ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಬೊಲುಗುಡ್ಡೆ ಗ್ರಾಮದ ಮನೆಯೊಂದರಲ್ಲಿ ಹಣವನ್ನು ಪಣವಾಗಿಟ್ಟು ಜೂಜಾಡುತ್ತಿದ್ದ ಆರೋಪದಲ್ಲಿ 17 ಮಂದಿಯನ್ನು ಶನಿವಾರ ರಾತ್ರಿ ಕಾವೂರು ಪೊಲೀಸರು ಬಂಧಿಸಿದ್ದಾರೆ.


ದೇರೆಬೈಲ್, ಕೊಂಚಾಡಿ, ಯೆಯ್ಯಾಡಿಯ ನಿವಾಸಿಗಳಾದ ದಿಕ್ಷೀತ್, ದಯಾನಂದ, ರಾಘವೇಂದ್ರ, ವೈಶಾಕ್ ಶೆಟ್ಟಿ ಉಮೇಶ್, ಗೌತಮ್, ಫರಂಗಿಪೇಟೆಯ ಪ್ರವೀಣ್ ಕುಮಾರ್, ಕಾಪುವಿನ ಶಾಹುಲ್ ಹಮೀದ್, ಬಜ್ಜೆ ಕಟೀಲು ನಡುಗೋಡುವಿನ ತಿಲಕ್‌ ರಾಜ್, ವಾಮಂಜೂರಿನ ಜಯಾನಂದ್ ಎಸ್., ಕೂಳೂರಿನ ಲಾರೆನ್ಸ್ ರಾಜಾ ಡಿಸೋಜ, ಉಳ್ಳಾಲ ಹೊಯ್ದೆ ಗದ್ದೆಯ ಇನಸ್ ಡಿಸೋಜ, ಉಳ್ಳಾಲಬೈಲ್‌ ಮುಹಮ್ಮದ್ ಅಶ್ರಫ್, ಪೆರ್ಮನ್ನೂರಿನ ಮುಹಮ್ಮದ್ ಫಯಾಝ್, ಉಳ್ಳಾಲದ ಮುಸ್ತಫ, ಆಡಂಕುದ್ರುವಿನ ಸುನೀಲ್ ಡಿಸೋಜ, ತಮಿಳಾಡಿನ ಕಣ್ಣನ್ ಬಂಧಿತ ಆರೋಪಿಗಳು, ಆರೋಪಿಗಳಿಂದ 1.92 ಲಕ್ಷ ರೂ. ನಗದು ಹಾಗೂ 18 ಮೊಬೈಲ್ ಗಳನ್ನು ವಶಪಡಿಸಲಾಗಿದೆ. ಒಟ್ಟಾರೆ ವಶಪಡಿಸಿಕೊಂಡ ಸೊತ್ತಿನ ಮೌಲ್ಯ 4 ಲಕ್ಷ ರೂ. ಎಂದು ಎಂದಾಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ಮಂಗಳೂರು ಉತ್ತರ ಉಪವಿಭಾಗದ ಪೊಲೀಸ್ ಸಹಾಯಕ ಆಯುಕ್ತ ಶ್ರೀಕಾಂತ್ ಕೆ. ಸೂಚನೆಯಂತೆ ಕಾವೂರು ಠಾಣೆಯ ಎಸ್ ಐ ಮಲ್ಲಿಕಾರ್ಜುನ ಬಿರಾದಾರ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಹಾಯಕ ಆಯುಕ್ತರ ಕಚೇರಿಯ ಸಿಬ್ಬಂದಿ ಚಂದ್ರು, ರೇಜಿ, ದಾಮೋದರ, ಹಾಲೇಶ್ ಹಾಗೂ ಕಾವೂರು ಠಾಣೆಯ ಎಎಸ್ಐ ಜಯರಾಮ್, ಮಂಜುನಾಥ, ನಾಗರಾಜ್ ಮತ್ತಿತರರು ಪಾಲ್ಗೊಂಡಿದ್ದರು. ಜೂಜಾಟ ನಡೆದ ಮನೆಯ ಮಾಲಕರು ಮತ್ತು ಬಾಡಿಗೆದಾರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!