ನಂದಾವರ: ಮನೆಗೆ ಗುಡ್ಡ ಕುಸಿದು ಬಿದ್ದು ಝರೀನಾ ಮೃತಪಟ್ಟ ಪ್ರಕರಣ: ಕಾಲೇಜಿಗೆ ತೆರಳುವ ಮಗಳಿಗೆ ತಿಂಡಿ ಮಾಡಲೆಂದು ಬೇಗನೇ ಎದ್ದಿದ್ದರು…
ಬಂಟ್ವಾಳ ತಾಲೂಕಿನ ನಂದಾವರದಲ್ಲಿ ಮನೆಯ ಮೇಲೆ ಗುಡ್ಡ ಕುಸಿದು ಬಿದ್ದು ಮನೆಯೊಳಗಿದ್ದ ಮಹಿಳೆ ಝರೀನಾ ಮೃತಪಟ್ಟ ಘಟನೆ ಜು.7ರಂದು ನಡೆದಿದ್ದು ಮಹಿಳೆಯ ಪತಿ ಹಾಗೂ ಪುತ್ರಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬೆಳಿಗ್ಗೆ 5.30ರ ಅಂದಾಜಿಗೆ ಘಟನೆ ನಡೆದಿದ್ದು ಮಂಗಳೂರಿಗೆ ಕಾಲೇಜಿಗೆ ತೆರಳುವ ಮಗಳಿಗೆ ತಿಂಡಿ ಮಾಡಲೆಂದು ಬೇಗನೇ ಎದ್ದಿದ್ದ ಝರೀನಾರವರು ಅಡುಗೆ ಮನೆಯಲ್ಲಿದಾಗ ಗುಡ್ಡ ಕುಸಿದಿದ್ದು ಮನೆಯ ಗೋಡೆ ಝರೀನಾರವರ ಮೇಲೆ ಬಿದ್ದು ಅದರಡಿಯಲ್ಲಿ ಸಿಲುಕಿಕೊಂಡ ಪರಿಣಾಮ ಅವರು ಕೊನೆಯುಸಿರೆಳೆದಿದ್ದರು. ಈ ವೇಳೆ ಮಹಮ್ಮದ್ ಹಾಗೂ ಪುತ್ರಿ ಸಫಾ ಬೇರೆ ಬೇರೆ ಕೋಣೆಯಲ್ಲಿ ಮಲಗಿದ್ದರು. ಅವರಿಗೂ ಗಾಯವಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.