ಕರಾವಳಿರಾಜ್ಯ

ನೆಲಮಂಗಲದಲ್ಲಿ ಕೆಟ್ಟು ನಿಂತ‌ ಬೆಂಗಳೂರು-ಮಂಗಳೂರು‌ ಸರಕಾರಿ‌ ಬಸ್; ಶಾಸಕ ಅಶೋಕ್ ರೈ ಮೂಲಕ ಬದಲಿ ವ್ಯವಸ್ಥೆ


ಪುತ್ತೂರು: ಬೆಂಗಳೂರಿಂದ‌ ಮಂಗಳೂರಿಗೆ ಬರುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ನೆಲಮಂಗಳದಲ್ಲಿ ಕೆಟ್ಟು ನಿಂತಿದ್ದು ಅತಂತ್ರ ಸ್ಥಿತಿಯಲ್ಲಿದ್ದ ಪ್ರಯಾಣಿಕರಿಗೆ ಪುತ್ತೂರು ಶಾಸಕ ಅಶೋಕ್ ರೈ ಅವರು ಬದಲಿ ಬಸ್ ವ್ಯವಸ್ಥೆ ಮಾಡುವ ಮೂಲಕ ಸಾರ್ವತ್ರಿಕ ಶ್ಲಾಘನೆಗೆ ಕಾರಣರಾಗಿದ್ದಾರೆ.

ಈ ಬಸ್ಸಿನಲ್ಲಿ‌ 30ಕ್ಕೂ ಹೆಚ್ಚು ಪ್ರಯಾಣಿಕರಿದ್ದರು.‌ ಬಸ್ಸಿನಲ್ಲಿ‌ಮಹಿಳೆಯರೇ‌ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಬಸ್ ಅರ್ಧ ದಾರಿಯಲ್ಲಿ ಕೆಟ್ಟು ನಿಂತಾಗ ಪ್ರಯಾಣಿಕರಿಗೆ ದಿಕ್ಕೇ ತೋಚದಂತಾಗಿತ್ತು. ಬಸ್ಸಿನಲ್ಲಿದ್ದ‌ ಮಿತ್ತೂರು ನಿವಾಸಿ ಶಬೀರ್ ಎಂಬವರು ಶಾಸಕ ಅಶೋಕ್ ರೈ ಅವರಿಗೆ ಕರೆ ಮಾಡಿ ಬಸ್ಸು ಕೆಟ್ಟು ಹೋಗಿ ಅರ್ಧ ದಾರಿಯಲ್ಲೇ ಬಾಕಿಯಾದ ವಿಚಾರವನ್ನು ತಿಳಿಸಿದರು. ತಕ್ಷಣ ಕಾರ್ಯ ಪೃವೃತ್ತರಾದ ಶಾಸಕ ಅಶೋಕ್ ಕುಮಾರ್ ರೈ ಅವರು ಬೆಂಗಳೂರು‌ ಡಿಪೋಗೆ ಕರೆ ಮಾಡಿ ಬಸ್ಸು ಕೆಟ್ಟು ಹೋದ ವಿಚಾರವನ್ನು ಅಧಿಕಾರಿಗಳ‌ ಗಮನಕ್ಕೆ ತಂದು ತಕ್ಷಣ ವ್ಯವಸ್ಥೆ ಮಾಡುವಂತೆ ಸೂಚಿಸಿದ್ದಾರೆ. ಶಾಸಕರು ಕರೆ ಮಾಡಿದ ತಕ್ಷಣವೇ ಬೇರೊಂದು ಬಸ್ಸನ್ನು ಅಧಿಕಾರಿಗಳು ಕಳುಹಿಸಿದ್ದು ಅದರಲ್ಲಿ ಪ್ರಯಾಣ ಬೆಳೆಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!