ಮದುವೆ ಕಾರ್ಯಕ್ರಮದಲ್ಲಿ ಡಿಜೆ ಹಾಡು ಹಾಕಿ ನೃತ್ಯ- ನಿಕಾಹ್ ನೆರವೇರಿಸಲು ನಿರಾಕರಿಸಿದ ಖಾಝಿ
ವಿವಾಹ ಸಮಾರಂಭದಲ್ಲಿ ಡಿಜೆ ಹಾಡಿಗೆ ನೃತ್ಯ ಮಾಡಿದ್ದಕ್ಕೆ ಅಸಮಾಧಾನಗೊಂಡ ಖಾಝಿಯೊಬ್ಬರು ನಿಕಾಹ್ ನೆರವೇರಿಸಲು ನಿರಾಕರಿಸಿರುವ ಘಟನೆ
ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯಲ್ಲಿ ಜು.2 ರಂದು ವರದಿಯಾಗಿದೆ.
ವಿವಾಹ ಸಮಾರಂಭ ನಡೆಯುತ್ತಿರುವ ವೇಳೆ ಡಿಜೆ ಹಾಡು ಹಾಕಿ ಕೆಲ ಅತಿಥಿಗಳು ಹಾಗೂ ಕುಟುಂಬಸ್ಥರು ಹೆಜ್ಜೆ ಹಾಕಿದ್ದಾರೆ. ಆದರೆ ಇದು ನಿಕಾಹ್ ನೆರವೇರಿಸಲು ಬಂದಿದ್ದ ಖಾಜಝಿ ಅವರ ಅಸಮಾಧಾನಕ್ಕೆ ಕಾರಣವಾಗಿದೆ.
ಇದು ಇಸ್ಲಾಂ ಸಂಪ್ರದಾಯಕ್ಕೆ ವಿರೋಧವಾಗಿದೆ. ನಾನು ಈ ನಿಕಾಹ್ ವನ್ನು ನಡೆಸಿ ಕೊಡಲಾರೆ ಎಂದಿದ್ದಾರೆ ಖಾಝಿ. ಈ ವೇಳೆ ವರನ ತಂದೆ ಖಾಝಿ ಬಳಿ ಕ್ಷಮೆ ಕೇಳಿದ್ದಾರೆ.ಈ ರೀತಿ ಮುಂದಕ್ಕೆ ಮಾಡಿದರೆ ದಂಡ ವಿಧಿಸಲಾಗುವುದು ಎಂದುಖಾಝಿ ಎಚ್ಚರಿಸಿದ ಬಳಿಕ ನಿಕಾಹ್ ನಡೆಸಲಾಯಿತು ಎಂದು ವರದಿಯಾಗಿದೆ.