ಕಡಬ: ಆಡನ್ನು ನುಂಗಲು ಯತ್ನಿಸಿದ ಹೆಬ್ಬಾವು-ಆಡು ಸಾವು
ಕಡಬ ಸಮೀಪದ ಐತ್ತೂರು ಗ್ರಾಮದಲ್ಲಿ ಭಾರೀ ಗಾತ್ರದ ಹೆಬ್ಬಾವೊಂದು ಆಡೊಂದನ್ನು ನುಂಗಲು ಯತ್ನಿಸಿದ ಘಟನೆ ವರದಿಯಾಗಿದ್ದು ಬ್ರಾಂತಿಕಟ್ಟೆ ಕೊಡೆಂಕಿರಿ ಎಂಬಲ್ಲಿ ಈ ಘಟನೆ ನಡೆದಿದೆ.

ಆಡನ್ನು ನುಂಗಲು ಹೆಬ್ಬಾವು ಸುಮಾರು ಒಂದು ತಾಸು ವಿಫಲ ಯತ್ನ ನಡೆಸಿದೆ. ಸ್ಥಳೀಯರಾದ ಜಾರ್ಜ್ ಕುಟ್ಟಿ ಎಂಬವರಿಗೆ ಸೇರಿದ ಸುಮಾರು 45 ಕೆಜಿ ತೂಕದ ಗಂಡು ಆಡು ಹೆಬ್ಬಾವಿನ ಉರುಳಿಗೆ ಸಿಕ್ಕಿ ಉಸಿರುಗಟ್ಟಿ ಪ್ರಾಣ ಚೆಲ್ಲಿದೆ.
ಆಡಿನ ತಲೆಯ ಭಾಗವನ್ನು ನುಂಗಿದರೂ ಉಳಿದ ಭಾಗವನ್ನು ನುಂಗಲು ಸಾಧ್ಯವಾಗದೆ ಸತ್ತ ಆಡನ್ನು ಸ್ಥಳದಲ್ಲೇ ಬಿಟ್ಟ ಹೆಬ್ಬಾವು ಪೊದೆಯೊಳಗೆ ಹೋಗಿದೆ. ಸ್ಥಳೀಯರು ಅರಣ್ಯ ಇಲಾಖೆಯ ಗಮನಕ್ಕೂ ತಂದಿರುವುದಾಗಿ ತಿಳಿದು ಬಂದಿದೆ.