ಕರಾವಳಿರಾಜಕೀಯರಾಜ್ಯ

ಕೊಯಿಲ ಫಾರ್ಮ್: ಪಾಳುಬಿದ್ದ ಜಾಗದಲ್ಲಿ ಗುತ್ತಿಗೆ ಆಧಾರದಲ್ಲಿ ಫಾರಂ ನಿರ್ಮಾಣಕ್ಕೆ ಅವಕಾಶ ಕಲ್ಪಿಸಲು
ಪಶುಸಂಗೋಪನಾ ಸಚಿವರಿಗೆ ಶಾಸಕ ಅಶೋಕ್ ರೈ ಮನವಿ


ಪುತ್ತೂರು ತಾಲ್ಲೂಕಿನ ಕೊಯಿಲ ಗ್ರಾಮದ ಪಾಳು ಬಿದ್ದಿರುವ 680 ಎಕರೆ ಪಶು ಸಂಗೋಪನೆ ಇಲಾಖೆಗೆ ಸೇರಿದ ಜಾಗದಲ್ಲಿ ಪಿ.ಪಿ.ಪಿ. ಆಧಾರದ ಮೇಲೆ ಖಾಸಗಿ ಸಂಸ್ಥೆಯವರಿಗೆ ಗುತ್ತಿಗೆ ಆಧಾರದ ಮೇಲೆ ಪೌಲ್ಟ್ರಿ ಫಾರಂ, ಕುರಿ ಸಾಕಾಣಿಕೆ, ಹಂದಿ ಸಾಕಾಣಿಕೆ, ಮತ್ತು ಹಸು ಸಾಕಾಣಿಕೆ ಮಾಡಲು ಅವಕಾಶ ಕಲ್ಪಿಸುವಂತೆ ಆಗ್ರಹಿಸಿ ಪುತ್ತೂರು ಶಾಸಕರಾದ ಅಶೋಕ್ ರೈಯವರು ಪಶುಸಂಗೋಪನಾ ಸಚಿವ ವೆಂಕಟೇಶ್‌ರವರಿಗೆ ಮನವಿ ಸಲ್ಲಿಸಿದ್ದಾರೆ.


ಜೂ.22 ರಂದು ಬೆಂಗಳೂರಿನಲ್ಲಿ ಸಚಿವರನ್ನು ಭೇಟಿಯಾದ ಶಾಸಕರು ಈ ಮನವಿ ಸಲ್ಲಿಸಿದ್ದು, ಪರಿಸರದಲ್ಲಿ ಸುಮಾರು 680 ಎಕರೆ ಜಾಗವು ಪಶು ಸಂಗೋಪನೆ ಇಲಾಖೆಗೆ ಸೇರಿದ್ದು, ಯಾವುದೇ ಉಪಯೋಗಕ್ಕೆ ಬಾರದೇ ಪಾಳು ಬಿದ್ದಿರುತ್ತದೆ, ಈ 680 ಎಕರೆ ಜಾಗದಲ್ಲಿ ಪಿ.ಪಿ.ಪಿ, ಮಾದರಿಯಲ್ಲಿ ಪೌಲ್ಟ್ರಿ ಫಾರಂ, ಕುರಿ ಸಾಕಾಣಿಕೆ,ಹಂದಿ ಸಾಕಾಣಿಕೆ, ಮತ್ತು ಹಸು ಸಾಕಾಣಿಕೆ ಮಾಡಲು ಅನುಕೂಲವಾಗುವಂತೆ ತಾವುಗಳು ನೋಡಲ್ ಅಧಿಕಾರಿಯನ್ನು ನೇಮಿಸಿ, ಕೂಡಲೇ ಪ್ರಕ್ರಿಯೆ ಪ್ರಾರಂಭಿಸಿದಲ್ಲಿ ಗುತ್ತಿಗೆ ಆಧಾರದ ಮೇಲೆ ಪಡೆಯಲು ಹೆಚ್ಚಿನ ಖಾಸಗಿ ಸಂಸ್ಥೆಗಳು ಆಸಕ್ತರಾಗಿರುತ್ತಾರೆ. ಇದರಿಂದ ಸರ್ಕಾರಕ್ಕೆ ಯಾವುದೇ ಆರ್ಥಿಕ ಹೊರೆಯಾಗುವುದಿಲ್ಲ ಹಾಗೂ ಪಿ.ಪಿ.ಪಿ. ಮಾದರಿಯಿಂದ ಸರ್ಕಾರಕ್ಕೆ ಕಂದಾಯವು ಸಹ ಸಂಗ್ರಹಣೆಯಾಗುತ್ತದೆ. ಅಲ್ಲದೇ ಪಾಳು ಬಿದ್ದಿರುವ ಜಾಗವು ಸಹ ಉಪಯೋಗವಾಗುತ್ತದೆ.
ಆದುದರಿಂದ ತಾವುಗಳು ಕೂಡಲೇ ಪುತ್ತೂರು ತಾಲ್ಲೂಕಿನ ಕೊಯಿಲಾ ಗ್ರಾಮದ ಪಾಳು ಬಿದ್ದಿರುವ 680 ಎಂದೆ ಪಶು ಸಂಗೋಪನೆ ಇಲಾಖೆಗೆ ಸೇರಿದ ಜಾಗದಲ್ಲಿ ಪಿ.ಪಿ.ಪಿ, ಆಧಾರದ ಮೇಲೆ ಖಾಸಗಿ ಸಂಸ್ಥೆಯವರಿಗೆ ಗುತ್ತಿಗೆ ಆಧಾರದ ಮೇಲೆ ಮೌಲ್ಕಿ ಫಾರಂ, ಕುರಿ ಸಾಕಾಣಿಕೆ, ಹಂದಿ ಸಾಕಾಣಿಕೆ, ಮತ್ತು ಹಸು ಸಾಕಾಣಿಕೆ ಮಾಡಲು ಅನುಕೂಲ ಮಾಡಿಕೊಡುವಂತೆ ಸಂಬಂಧಪಟ್ಟವರಿಗೆ ಆದೇಶಿಸುವಂತೆ ಸಚಿವರಿಗೆ ನೀಡಿದ ಮನವಿಯಲ್ಲಿ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!