ಜಿಲ್ಲೆ

ಮಡಿಕೇರಿ: ಖಾಸಗಿ ವಿಲ್ಲಾಗಳ ನಿರ್ಮಾಣಕ್ಕೆ 50 ಎಕರೆ ಬೆಟ್ಟವನ್ನು ಅಗೆದ ಆರೋಪ-ಸಾರ್ವಜನಿಕರ ಆಕ್ರೋಶ

ಕೊಡಗು ಜಿಲ್ಲೆಯ ಮಡಿಕೇರಿ ನಗರದ ಸಮೀಪ ಜಿಲ್ಲಾಧಿಕಾರಿಗಳ ಕಚೇರಿಯ ಅಣತಿ ದೂರದಲ್ಲಿ ಸುಮಾರು 50 ಎಕರೆ ಜಾಗವನ್ನು ಜೆಸಿಬಿ ಮೂಲಕ ಖಾಸಗಿ ವ್ಯಕ್ತಿಗಳು ಅಗೆದು ಹಾಕಿದ್ದಾರೆ ಎಂಬ ಆರೋಪ ಕೇಳಿಬರುತ್ತಿದ್ದು ಇದು ಸ್ಥಳೀಯ ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಆಂಧ್ರಪ್ರದೇಶ ನೆಲ್ಲೂರು ಮೂಲದ ಉದ್ಯಮಿಗಳು ಜಾಗವನ್ನು ಖರೀದಿ ಮಾಡಿರುವ ಬೆಟ್ಟವನ್ನು ಇದೀಗ ಖಾಸಗಿ ವಿಲ್ಲಾಗಳ ನಿರ್ಮಾಣಕ್ಕಾಗಿ ಬೃಹತ್ ಜೆಸಿಬಿ ಯಂತ್ರಗಳನ್ನು ತಂದು ಅಗೆಯಲಾಗಿದೆ.ಈ ಪ್ರದೇಶಗಳು ಸೂಕ್ಷ್ಮ ಪ್ರದೇಶ ಎಂದು ಭೂವಿಜ್ಞಾನಿಗಳ ವರದಿಯಲ್ಲಿ ಗುರುತಿಸಿದ್ದರೂ ಇದೀಗ ಈ ಪ್ರದೇಶದಲ್ಲಿ ಬೆಟ್ಟ ನಾಶ ಮಾಡುತ್ತಿರುವುದಕ್ಕೆ ಸ್ಥಳೀಯರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಕಳೆದ ಎರಡು ಮೂರು ವರ್ಷಗಳಿಂದ ನಿರಂತರವಾಗಿ ಈ ಭಾಗದಲ್ಲಿ ಭೂಕುಸಿತಗಳು, ಪ್ರಾಕೃತಿಕ ವಿಕೋಪಗಳು ಉಂಟಾಗುತ್ತಿದ್ದು ಮಳೆಗಾಲದಲ್ಲಿ ಭೂಕುಸಿತ ಸಾಧ್ಯತೆಯಿರುವುದರಿಂದ ಬೆಟ್ಟದ ತಪ್ಪಲಿನ ನಿವಾಸಿಗಳಿಗೆ ಇದೀಗ ಆತಂಕ ಶುರುವಾಗಿದೆ.

ಈ ಬೆಟ್ಟದಲ್ಲಿ ಬೆಲೆಬಾಳುವ ಹಲವು ಗಿಡ ಮರಗಳು ಇದ್ದು ಈಗ ಜೆಸಿಬಿ ಯಂತ್ರಗಳಿಂದ ಎಲ್ಲವನ್ನು ನಾಶ ಮಾಡಲಾಗಿದೆ. ಇದೀಗ ಈ ಘಟನೆಗೆ ಸಂಬಂಧಿಸಿದ ಸ್ಥಳೀಯರೋರ್ವರು ನಗರಸಭೆಗೆ ದೂರು ನೀಡಿದ್ದಾರೆ ಎನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!