ಕಾವು ಬದ್ರಿಯಾ ಎಜ್ಯು ಸೆಂಟರ್ ನೂತನ ಕಟ್ಟಡದ ಕಾಮಗಾರಿ ಉದ್ಘಾಟನಾ ಸಮಾರಂಭ
ಪುತ್ತೂರು ತಾಲೂಕಿನ ಕಾವು ಪರಿಸರದಲ್ಲಿ ನೂತನವಾಗಿ ಆರಂಭವಾಗಲಿರುವ ಬದ್ರಿಯಾ ಎಜ್ಯು ಸೆಂಟರ್ ಇದರ ನೂತನ ಕಟ್ಟಡ ಕಾಮಗಾರಿಯ ಶಿಲಾನ್ಯಾಸ ಕಾರ್ಯಕ್ರಮ ಇಂದ(ಜೂ.9) ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಅಸ್ಸಯ್ಯದ್ ಫಕ್ರುದ್ದೀನ್ ಹದ್ದಾದ್ ತಂಗಳ್ ವಹಿಸಿದ್ದರು. ನೂತನ ಕಟ್ಟಡ ಕಾಮಗಾರಿಯ ಉದ್ಘಾಟನೆಯನ್ನು ಹಿರಿಯ ಧಾರ್ಮಿಕ ವಿದ್ವಾಂಸರಾದ ಶೈಖುನಾ ಮುಹ್ಯಿಸ್ಸುನ್ನ ಪೊನ್ನಳ ಅಬ್ದುಲ್ ಖಾದರ್ ಮುಸ್ಲಿಯಾರ್ ನೆರವೇರಿಸಿ ಪ್ರಾರ್ಥನೆ ನಡೆಸಿದರು.

ಬಳಿಕ ನಡೆದ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಧಾರ್ಮಿಕ ಪಂಡಿತರಾದ ಅಬ್ದುಲ್ ಮಜೀದ್ ಸಖಾಫಿ ಕುಟ್ಟಿಶ್ಯೆರಿ ನೆರವೇರಿಸಿ ಶುಭ ಹಾರೈಸಿದರು. ವೇದಿಕೆಯಲ್ಲಿ ಕಟ್ಟಡ ಸಮಿತಿಯ ಸಂಚಾಲಕರಾದ ಅಬ್ದುಲ್ ರಹಮಾನ್ ಶಾಲಿಮಾರ್, ಉಪ ಸಂಚಾಲಕ ಹಾಜಿ ಕೆಎಂ ಮುಸ್ತಫ ಸುಳ್ಯ, ಹಾಗೂ ಮುಖಂಡರುಗಳಾದ ಅಲಿ ಹಾಜಿ ಬಜ್ಪೆ, ಉಮ್ಮರ್ ಸಖಾಫಿ, ಯೂಸುಫ್ ಕಾವು, ಹಿಝ್ವುಧೀನ್ ಮುಸ್ಲಿಯಾರ್, ಅಬ್ದುಲ್ ಹಮೀದ್ ಬೀಜ ಕೊಚ್ಚಿ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕಟ್ಟಡ ಸಮಿತಿಯ ಮುಖಂಡರುಗಳಾದ ಅಬ್ದುಲ್ಲಾಹಿ ಅಹ್ಸನಿ ಮಾಡನೂರು, ಅಬು ಶಝ ಉಸ್ತಾದ್, ಅಬ್ದುಲ್ ಹಮೀದ್ ಸುಣ್ಣ ಮೂಲೆ, ಅಬ್ದುಲ್ ಕರೀಂ ಸಖಾಫಿ ಕಟ್ಟತಾರು, ಸಿದ್ದಿಕ್ ಕಟ್ಟೇಕಾರ್ಸ್ ಸುಳ್ಯ, ಫೈಸಲ್ ಸಪ್ನಾ ಮೊದಲಾದವರು ಭಾಗವಹಿಸಿದ್ದರು.
ಕಟ್ಟಡ ಸಮಿತಿಯ ಸದಸ್ಯರು ಕಾರ್ಯಕ್ರಮದಲ್ಲಿ ಸಹಕರಿಸಿದರು.