ಕರಾವಳಿರಾಜ್ಯ

ಸ್ವಾಮಿ ನಾರಾಯಣ ಗುರುಗಳ ವಿಚಾರವನ್ನು ಮತ್ತೆ ಪಠ್ಯದಲ್ಲಿ ಸೇರಿಸಲು ಆಗ್ರಹಿಸಿ ವೇದನಾಥ ಸುವರ್ಣರಿಂದ ಶಿಕ್ಷಣ ಸಚಿವರಿಗೆ ಮನವಿ

ಪುತ್ತೂರು: ದ.ಕ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ವೇದನಾಥ ಸುವರ್ಣ ಅವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾದರು.


ಹಿಂದಿನ ಸರಕಾರ 10ನೇ ತರಗತಿಯ ಪಠ್ಯ ಪುಸ್ತಕದಿಂದ ಸ್ವಾಮಿ ನಾರಾಯಣ ಗುರುಗಳ ವಿಚಾರವನ್ನು ಕೈ ಬಿಟ್ಟಿದ್ದು ಅದನ್ನು ವಾಪಾಸ್ ಪುಸ್ತಕಕ್ಕೆ ಸೇರಿಸುವಂತೆ ಮನವಿ ಮಾಡಿದ್ದಾರೆ.
ಮನವಿಗೆ ಸಚಿವರು ಸಾಕಾರಾತ್ಮಕ ರೀತಿಯಲ್ಲಿ ಸ್ಪಂಧಿಸಿದ್ದಾರೆ ಎಂದು ವೇದನಾಥ ಸುವರ್ಣ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!