ಭೀಕರ ರೈಲು ದುರಂತ:ಬೆಳ್ತಂಗಡಿಯ ಮೂವರು ಮಹಿಳೆಯರು ಅಪಾಯದಿಂದ ಪಾರು
ಬೆಳ್ತಂಗಡಿ: ಒಡಿಶಾದಲ್ಲಿ ಸಂಭವಿಸಿದ ಭೀಕರ ರೈಲು ದುರಂತದಲ್ಲಿ ಬೆಳ್ತಂಗಡಿ ತಾಲೂಕಿನ ವೇಣೂರಿನ ಮೂವರು ಮಹಿಳೆಯರು ಅಪಾಯದಿಂದ ಪಾರಾಗಿದ್ದಾರೆ.

ಮಮತಾ ಪ್ರಸಾದ್ ಜೈನ್, ಆಶಾಲತಾ ಜೈನ್ ಹಾಗೂ ದೀಪಾಶ್ರೀ ಕತ್ತೋಡಿ ಅಪಾಯದಿಂದ ಪಾರಾದವರು. ಇವರು ಜೈನರ ತೀರ್ಥಕ್ಷೇತ್ರಗಳಿಗೆ ಯಾತ್ರೆ ಹೊರಟಿದ್ದರು. ಇವರು ವೇಣೂರಿನಿಂದ ಕಳಸಕ್ಕೆ ತೆರಳಿ ಅಲ್ಲಿಂದ 110 ಮಂದಿ ಯಾತ್ರಿಗಳು ಬಸ್ಸಿನ ಮೂಲಕ ಬೆಂಗಳೂರಿಗೆ ತೆರಳಿ ಅಲ್ಲಿಂದ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು ಮೂಲಕ ಪ್ರಯಾಣ ಬೆಳೆಸಿದ್ದರು.
ಇವರಿದ್ದ ಭೋಗಿ ತೀವ್ರವಾಗಿ ಅಲುಗಾಡಿದ ಅನುಭವ ಇವರಿಗಾಗಿದ್ದರೂ ಯಾವುದೇ ಅಪಾಯ ಸಂಭವಿಸದೆ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.