ಭ್ರೂಣಲಿಂಗ ಪತ್ತೆ ಪ್ರಕರಣದಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮಕ್ಕೆ ಕುಮಾರಸ್ವಾಮಿ ಆಗ್ರಹ
ಭ್ರೂಣಲಿಂಗ ಪತ್ತೆ ಹಾಗೂ ಹತ್ಯೆ ಪ್ರಕರಣದಲ್ಲಿ ಭಾಗಿಯಾದವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ರಾಮನಗರದಲ್ಲಿ ಮಾತನಾಡಿದ ಅವರು, ಈಗಲೂ ಹೆಣ್ಣುಮಕ್ಕಳ ಬಗ್ಗೆ ಅಂತಹ ಭಾವನೆ ಇರುವುದು ದುರಂತ. ಯಾವ ಮಗು ಹುಟ್ಟಲಿದೆ ಎಂದು 4-5 ತಿಂಗಳ ಮೊದಲೇ ತಿಳಿಯಬಹುದು. ಅಂತಹ ತಂತ್ರಜ್ಞಾನ ಈಗ ಇದೆ. ಇಂದಿನ ಯುಗದಲ್ಲೂ ಹೆಣ್ಣು ಮಕ್ಕಳ ಬಗ್ಗೆ ಅಂತಹ ಭಾವನೆ ಇದ್ದು, ಅದನ್ನು ಹೋಗಲಾಡಿಸಬೇಕು ಎಂದರು.
ತಂದೆ, ತಾಯಿಗೆ ಹೆಣ್ಮಕ್ಕಳು ನೀಡುವ ಗೌರವ ಗಂಡು ಮಕ್ಕಳು ಕೊಡಲ್ಲ. ಹಾಗಂತ ಗಂಡು ಮಕ್ಕಳನ್ನ ದೂರುವುದು ಬೇಡ, ನಾನು ನೋಡಿದ್ದೇನೆ, ನನಗೆ ಅನುಭವ ಇದೆ. ಹೆಣ್ಣುಮಕ್ಕಳು ಹುಟ್ಟಿದರೆ ಆ ಕುಟುಂಬ ಉತ್ತಮ ಬದುಕು ಕಾಣಲು ಸಾಧ್ಯವಿದೆ ಎಂದರು.