ಕರಾವಳಿ

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಹಮ್ಮದ್ ಹಾಜಿ ಕುಕ್ಕುವಳ್ಳಿಯವರಿಗೆ ದೇಶ ವಿದೇಶಗಳಲ್ಲಿ ಸನ್ಮಾನಗಳ ಸುರಿಮಳೆ

ಪುತ್ತೂರು: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಮಾಜ ಸೇವಕ, ಉದ್ಯಮಿ ಮಹಮ್ಮದ್ ಹಾಜಿ ಕುಕ್ಕುವಳ್ಳಿಯವರಿಗೆ ಸನ್ಮಾನಗಳ ಸುರಿಮಳೆಯೇ ದೊರಕಿದೆ.

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸಿ ಕೆಲವೇ ದಿನ ಊರಿನಲ್ಲಿದ್ದ ಅವರಿಗೆ ವಿವಿಧ ಸಂಘ ಸಂಸ್ಥೆಗಳು ಸನ್ಮಾನ ನೀಡಿ ಗೌರವಿಸಿತ್ತು. ಬಳಿಕ ವಿದೇಶಕ್ಕೆ ತೆರಳಿದ ಅವರಿಗೆ ಅಲ್ಲೂ ಭರಪೂರ ಸನ್ಮಾನಗಳು ದೊರಕುತ್ತಿದೆ.

ಈಗಾಗಲೇ ದುಬೈಯಲ್ಲಿ ಕೆಲವು ಸನ್ಮಾನಗಳನ್ನು ಸ್ವೀಕರಿಸಿದ ಮಹಮ್ಮದ್ ಹಾಜಿ ಕುಕ್ಕುವಳ್ಳಿಯವರಿಗೆ ಇದೀಗ ಸೌದಿ ಅರೇಬಿಯಾದಲ್ಲೂ ಅನೇಕ ಸನ್ಮಾನಗಳು ದೊರಕುತ್ತಿದೆ. ಕೆಲವರು ಚಿನ್ನದ ಉಂಗುರ ನೀಡಿ ಅವರನ್ನು ಸನ್ಮಾನಿಸಿದ್ದಾರೆ. ಸಂಘ ಜೀವಿಯಾಗಿ, ಪರೋಪಕಾರಿಯಾಗಿ, ಬಡವರ ಪರ ಕಾರ್ಯ ನಿರ್ವಹಿಸುತ್ತಿದ್ದ ಮಹಮ್ಮದ್ ಹಾಜಿ ಕುಕ್ಕುವಳ್ಳಿಯವರಿಗೆ ಅರ್ಹವಾಗಿ ಎಲ್ಲೆಡೆಯಿಂದ ಗೌರವಾರ್ಪಣೆಗಳು ದೊರಕುತ್ತಿದೆ ಎಂದು ಅವರ ಆತ್ಮೀಯ ಬಳಗದಲ್ಲಿ ಗುರುತಿಸಿಕೊಂಡವರು, ಹಿತೈಷಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!