ಎಸ್‌ಐಆರ್ ಸುಧಾರಣೆಯಲ್ಲ, ದಬ್ಬಾಳಿಕೆ: ರಾಹುಲ್ ಗಾಂಧಿ
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್)ನಿಂದ ದೇಶಾದ್ಯಂತ ಅವ್ಯವಸ್ಥೆ ತಾಂಡವವಾಡುತ್ತಿದೆ. ಎಸ್‌ಐಆರ್ ಕೆಲಸಕ್ಕೆ ಸಂಬಂಧಿಸಿ ಒತ್ತಡದಿಂದ ಹಲವಾರು ಬೂತ್ ಮಟ್ಟದ ಅಧಿಕಾರಿ (ಬಿಎಲ್‌ಒ)ಗಳು ಸಾವನ್ನಪ್ಪಿದ್ದಾ ರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಎಸ್‌ಐಆರ್ ದೇಶದಲ್ಲಿ ಅವ್ಯವಸ್ಥೆ ಸೃಷ್ಟಿಸಿದೆ. ಅನೇಕ ಬಿಎಲ್‌ಒಗಳು ಹೃದಯಾಘಾತ, ಒತ್ತಡ, ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾರೆ. ಎಸ್‌ಐಆರ್ ಒಂದು ಸುಧಾರಣೆಯಲ್ಲ, ಬದಲಾಗಿ ದಬ್ಬಾಳಿಕೆ ಎಂದು ಅವರು ಹೇಳಿದ್ದಾರೆ.
ಎಸ್‌ಐಆರ್ ಯೋಜಿತ ತಂತ್ರ. ಈ ಪ್ರಕ್ರಿಯೆಯ ಅಡಿಯಲ್ಲಿ ನಾಗರಿಕರಿಗೆ ಕಿರುಕುಳ ನೀಡಲಾಗುತ್ತಿದೆ. ಒತ್ತಡದಿಂದ ಸಂಭವಿಸುವ ಬಿಎಲ್‌ಗಳ ಸಾವುಗಳನ್ನು ಮುಖ್ಯವೆಂದು ಪರಿಗಣಿಸುತ್ತಿಲ್ಲ. ಅಧಿಕಾರದಲ್ಲಿರುವವರನ್ನು ರಕ್ಷಿಸಲು ಪ್ರಜಾಪ್ರಭುತ್ವವನ್ನು ಬಲಿ ಕೊಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.




