ಶೇಕ್ ಹಸೀನಾರನ್ನು ಹಸ್ತಾಂತರಿಸಲು ಭಾರತಕ್ಕೆ ಮನವಿ ಮಾಡಿದ ಬಾಂಗ್ಲಾದೇಶ
ಬಾಂಗ್ಲಾದೇಶದ ನ್ಯಾಯಮಂಡಳಿ ಪದಚ್ಯುತ ಪ್ರಧಾನಿ ಶೇಕ್ ಹಸೀನಾರಿಗೆ ಮರಣ ದಂಡನೆ ವಿಧಿಸಿರುವ ಬೆನ್ನಿಗೇ, ಅವರನ್ನು ಹಸ್ತಾಂತರಿಸುವಂತೆ ಆ ದೇಶದ ವಿದೇಶ ಸಚಿವಾಲಯವು ಭಾರತಕ್ಕೆ ಮನವಿ ಮಾಡಿದೆ.

ಬಾಂಗ್ಲಾದೇಶವು ಭಾರತದೊಂದಿಗೆ ಗಡಿಪಾರು ಒಪ್ಪಂದವನ್ನು ಹೊಂದಿದೆ ಎಂದು ಪತ್ರವೊಂದರಲ್ಲಿ ನೆನಪಿಸಿರುವ ಸಚಿವಾಲಯವು, ಹಸೀನಾ ಬಾಂಗ್ಲಾದೇಶಕ್ಕೆ ಮರಳುವಂತೆ ನೋಡಿಕೊಳ್ಳುವುದು ಭಾರತದ ಬದ್ದತೆಯಾಗಿದೆ ಎಂದು ಹೇಳಿದೆ. ಶೇಕ್ ಹಸೀನಾ ಭಾರತದಲ್ಲಿ ಆಶ್ರಯ ಪಡೆದಿದ್ದಾರೆ



