ಮುಂಡೂರಿನಲ್ಲಿ ಕಾಂಗ್ರೆಸ್ ವಿಜಯೋತ್ಸವ
ಪುತ್ತೂರು: ಮುಂಡೂರಿನಲ್ಲಿ ಕಾಂಗ್ರೆಸ್ ವತಿಯಿಂದ ವಿಜಯೋತ್ಸವ ಮೇ.20ರಂದು ಸಂಜೆ ನಡೆಯಿತು. ಕಾರ್ಯಕರ್ತರು ಮತ್ತು ನಾಯಕರು ಪಟಾಕಿ ಸಿಡಿಸಿ ಜೈಕಾರ ಹಾಕಿ ಸಂಭ್ರಮಿಸಿದರು.
ನಂತರ ಸಿಹಿ ವಿತರಿಸಲಾಯಿತು.

ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಯಾಕೂಬ್ ಮುಲಾರ್ ಮಾತನಾಡಿ ರಾಜ್ಯದಲ್ಲೂ, ಪುತ್ತೂರಿನಲ್ಲೂ ಕಾಂಗ್ರೆಸ್ ವಿಜಯ ಪತಾಕೆ ಹಾರಿಸಿದ್ದು ಬಿಜೆಪಿಯ ಪೊಳ್ಳು ಭರವಸೆಗಳಿಗೆ ಬಲಿಯಾಗದ ಜನತೆ ಕಾಂಗ್ರೆಸಿಗೆ ಆಶೀರ್ವದಿಸಿದ್ದಾರೆ. ಕಾಂಗ್ರೆಸ್ ಚುನಾವಣಾ ಪೂರ್ವದಲ್ಲಿ ನೀಡಿರುವ ಎಲ್ಲಾ ಐದು ಗ್ಯಾರಂಟಿಗಳನ್ನು ಜಾರಿಗೆ ತರಲಿದ್ದು ನಮ್ಮ ಸರಕಾರ ನುಡಿದಂತೆ ನಡೆಯಲಿದೆ ಎಂದು ಅವರು ಹೇಳಿದರು.
ಕಾಂಗ್ರೆಸ್ ಮುಖಂಡರಾದ ಮಹಾಲಿಂಗ ನಾಯ್ಕ, ಸಂಜೀವ ಪೂಜಾರಿ ಕುರೆಮಜಲು, ಬಾಲಕೃಷ್ಣ ಕಣ್ಣರಾಯ, ಅಣ್ಣಿ ಪೂಜಾರಿ ಮೊದಲಾದವರು ಮಾತನಾಡಿದರು. ಪ್ರಮುಖರಾದ ಇಬ್ರಾಹಿಂ ಮುಲಾರ್, ಬಿ.ಟಿ ಮಹೇಶ್ಚಂದ್ರ ಸಾಲ್ಯಾನ್, ಶಾರದಾ ಬಂಡಿಕಾನ, ಪದ್ಮಯ ನಾಯ್ಕ ಬಂಡಿಕಾನ, ಅಶ್ರಫ್ ಮುಲಾರ್, ಅಬ್ದುಲ್ ರಹಿಮಾನ್ ಮುಲಾರ್, ಕಾವ್ಯ ಪಜಿಮಣ್ಣು, ಗಣೇಶ್ ಕೊರುಂಗು, ಝಕರಿಯಾ ಮುಲಾರ್ ಜಲಜ ಕಂಪ, ಸುಶೀಲ ಕಂಪ, ಸುಲೈಮಾನ್ ಮುಲಾರ್ ಸಹಿತ ಹಲವರು ಉಪಸ್ಥಿತರಿದ್ದರು. ಸುಪ್ರೀತ್ ಕಣ್ಣರಾಯ ಸ್ವಾಗತಿಸಿದರು.