ಮಂಗಳೂರು: ತೊಕ್ಕೊಟ್ಟಿನಲ್ಲಿ ರೈಲು ಡಿಕ್ಕಿ ಹೊಡೆದು ಯುವಕ ದಾರುಣ ಸಾವು
ಮಂಗಳೂರು: ತೊಕ್ಕೊಟ್ಟು ಬಳಿ ರೈಲ್ವೇ ಹಳಿ ದಾಟುತ್ತಿದ್ದ ಯುವಕನಿಗೆ ರೈಲು ಢಿಕ್ಕಿ ಹೊಡೆದ ಪರಿಣಾಮ ಯುವಕ ಸ್ಥಳದಲ್ಲೇ ಮೃತಪಟ್ಟ ಘಟನೆ ಮೇ.20ರಂದು ರಾತ್ರಿ ವರದಿಯಾಗಿದೆ. ಬಿಹಾರ ಮೂಲದ ಶ್ರವಣ್ ದಾಸ್(37. ವ ) ಮೃತಪಟ್ಟವರು.

ತೊಕ್ಕೊಟ್ಟಿನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಶ್ರವಣ್ ದಾಸ್, ಕೆಲಸ ಮುಗಿಸಿ ಮನೆಗೆ ಬಂದ ಬಳಿಕ ಹೊಟೇಲ್ ಗೆ ಹೋಗಿದ್ದರು. ಅಲ್ಲಿಂದ ವಾಪಸ್ ಬರುವಾಗ ರೈಲ್ವೆ ಹಳಿ ದಾಟುತ್ತಿದ್ದ ಅವರಿಗೆ ರೈಲು ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ರೈಲ್ವೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.