ಅನ್ನ ಮಾಡದೇ ಕೇವಲ ಸಾಂಬಾರು ಮಾತ್ರ ಮಾಡಿದ್ದಕ್ಕೆ ಕೋಪಗೊಂಡ ವ್ಯಕ್ತಿಯಿಂದ ಪತ್ನಿಯ ಕೊಲೆ
ಅನ್ನ ಮಾಡದೇ ಕೇವಲ ಸಾಂಬಾರು ಮಾತ್ರ ಮಾಡಿದ್ದಾರೆ ಎಂದು ಕೋಪಗೊಂಡ ವ್ಯಕ್ತಿಯೊಬ್ಬ ಪತ್ನಿಯನ್ನೇ ಕೊಲೆ ಮಾಡಿರುವ ಘಟನೆ ಒಡಿಶಾದ ಸಂಬಲ್ಪುರದಲ್ಲಿ ವರದಿಯಾಗಿದೆ.

ಜಮನಕಿರಾ ಪೊಲೀಸ್ ಠಾಣಾ ವ್ಯಾಪ್ತಿಯ ನುವಾಧಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಆರೋಪಿಯನ್ನು 40 ವರ್ಷದ ಸನಾತನ ಧಾರುವಾ ಎಂದು ಗುರುತಿಸಲಾಗಿದ್ದು, ಆತನ ಪತ್ನಿಯನ್ನು 34 ವರ್ಷದ ಪುಷ್ಪಾ ಧರುವಾ ಎಂದು ಗುರುತಿಸಲಾಗಿದೆ. ಇದೀಗ ಪೊಲೀಸರು ವ್ಯಕ್ತಿಯನ್ನು ಬಂಧಿಸಿದ್ದಾರೆ.
ಸನಾತನ ರಾತ್ರಿ ಮನೆಗೆ ಬಂದಾಗ ಪತ್ನಿ ಕೇವಲ ಕರಿ ಮಾಡಿದ್ದರು, ಅನ್ನ ಮಾಡಿಲ್ಲವೆಂದು ಕೋಪಗೊಂಡ ಪತಿ ಪತ್ನಿಯನ್ನು ಹತ್ಯೆ ಮಾಡಿದ್ದಾನೆ. ಘಟನೆ ಬಗ್ಗೆ ಸ್ಥಳೀಯರು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.