ಪುತ್ತೂರು ನಗರಸಭಾ ಸದಸ್ಯ ಶಕ್ತಿ ಸಿನ್ಹಾ ನಿಧನ
ಪುತ್ತೂರು : ನಗರಸಭಾ ಸದಸ್ಯ, ನೆಲ್ಲಿಕಟ್ಟೆ ನಿವಾಸಿ ಶಕ್ತಿ ಸಿನ್ಹಾ ರವರು ಹೃದಯಾಘಾತದಿಂದ ಅ . 17ರಂದು ನಿಧನರಾದರು.
![](https://newsbites.in/wp-content/uploads/2023/10/IMG_20231017_100042-1024x581.jpg)
ತನ್ನ ಕಿರಿಯ ಮಗಳ ಜೊತೆ ವಾಸವಿದ್ದ ಶಕ್ತಿ ಸಿನ್ಹಾ ರವರಿಗೆ ಇಂದು ಮುಂಜಾನೆ ಹೃದಯಾಘಾತವಾಗಿದ್ದು, ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಕೊನೆಯುಸಿರೆಳೆದರು ಎಂದು ವರದಿಯಾಗಿದೆ.
ಮೃತರು ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಶಕ್ತಿ ಸಿನ್ಹಾ ಅವರು ನಗರ ಸಭೆ ಸದಸ್ಯರಾಗಿದ್ದು ಎಲ್ಲರಿಗೆ ಚಿರಪರಿಚಿತರಾಗಿದ್ದರು