ಎಸ್ಸೆಸ್ಸೆಲ್ಸಿ ಫಲಿತಾಂಶ: ಬೆಳಂದೂರು ಈಡನ್ ಗ್ಲೋಬಲ್ ಸ್ಕೂಲ್ 100.ಶೇ ಫಲಿತಾಂಶದ ಸಾಧನೆ
ಪುತ್ತೂರು: 2022-23ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶದಲ್ಲಿ ಬೆಳಂದೂರು ಈಡನ್ ಗ್ಲೋಬಲ್ ಶಾಲೆಯ ಪರೀಕ್ಷೆ ಬರೆದ ಎಲ್ಲಾ 12 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶಾಲೆಗೆ ಶೇಕಡಾ 100% ಫಲಿತಾಂಶ ಪಡೆದಿದೆ.
ಶೇ.33% ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಹಾಗೂ ಶೇಕಡಾ 67% ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಈ ಪೈಕಿ ಫಾತಿಮತ್ ಇಶಾ 588, ಮಹಮ್ಮದ್ ಫಸೀಹ್ 570 ಮಹಮ್ಮದ್ ಸಿನಾನ್ ಬಿ.ಐ 560, ಮಹಮ್ಮದ್ ಶಮ್ಮಾಸ್ 541 ಅಂಕಗಳನ್ನು ಪಡೆದಿದ್ದಾರೆ.