ರಾಜಕೀಯರಾಜ್ಯ

ಚುನಾವಣಾ ಪ್ರಚಾರದ ವೇಳೆ ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಮೇಲೆ ಕಲ್ಲು ತೂರಾಟ- ಆಸ್ಪತ್ರೆಗೆ ದಾಖಲು



ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರ ಮೇಲೆ ಕಲ್ಲು ತೂರಾಟ ನಡೆದಿದೆ. ಕೊರಟಗೆರೆಯಲ್ಲಿ ಶುಕ್ರವಾರ ಪ್ರಚಾರದಲ್ಲಿ ತೊಡಗಿದ್ದ ವೇಳೆ ಕಲ್ಲು ತೂರಾಟ ನಡೆದಿದೆ ಕಲ್ಲೇಟಿನಿಂದಾಗಿ ಪರಮೇಶ್ವರ್‌ ಅವರ ತಲೆಗೆ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಚುನಾವಣಾ ಪ್ರಚಾರದ ವೇಳೆ ಕಾರ್ಯಕರ್ತರು ಡಾ.ಜಿ. ಪರಮೇಶ್ವರ್ ಅವರನ್ನು ಎತ್ತಿಕೊಂಡು ಘೋಷಣೆ ಕೂಗುತ್ತಾ ಹೂ ಮಳೆ ಸುರಿಸಿದ್ದಾರೆ, ಈ ವೇಳೆ ಅವುಗಳ ನಡುವೆ ತೂರಿಬಂದ ಕಲ್ಲೊಂದು ಪರಮೇಶ್ವರ್ ಅವರ ತಲೆಗೆ ಬಡಿದು ರಕ್ತಸ್ರಾವವಾಗಿದೆ ಎನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!