ವಿಟ್ಲ: ಪೆರುವಾಯಿ ಆಸು ಪಾಸಿನಲ್ಲಿ ಅಶೋಕ್ ರೈ ಪರ ಬಿರುಸಿನ ಮತಯಾಚನೆ

ವಿಟ್ಲ: ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಅವರ ಪರವಾಗಿ ಕಾಂಗ್ರೆಸ್ ಪ್ರಮುಖರು ಮತ್ತು ಕಾರ್ಯಕರ್ತರು ಮತ ಯಾಚನೆ ನಡೆಸಿದರು. ಪೆರುವಾಯಿ ವ್ಯಾಪ್ತಿಯ ಕಡಂಬಿಲ, ದಂದಪುಣಿ, ಪೇರಡ್ಕ ಪರಿಸರದಲ್ಲಿ ಮನೆ ಮನೆಗೆ ತೆರಳಿ ಮತ ಯಾಚನೆ ನಡೆಸಿದರು.

ಪೆರುವಾಯಿ ಗ್ರಾ.ಪಂ ಉಪಾಧ್ಯಕ್ಷೆ ನಫೀಸಾ ಪೆರುವಾಯಿ, ಸದಸ್ಯೆ ರಶ್ಮಿ, ಕಾರ್ಯಕರ್ತರಾದ ಮಹಮ್ಮದ್ ಹನೀಫ್, ಒಂದನೇ ವಾರ್ಡ್ ಅಧ್ಯಕ್ಷ ಮಹಮ್ಮದ್, ಕಾರ್ಯದರ್ಶಿ ಸಿದ್ದೀಕ್, ಕಾರ್ಯಕರ್ತರಾದ ಪುಷ್ಪರಾಜ, ಚಮ್ಮು ಬದಿಯಾರ್ ಮತ್ತಿತರರು ಉಪಸ್ಥಿತರಿದ್ದರು.
