ರಾಜಕೀಯರಾಜ್ಯ

ಮಾಜಿ ಮುಖ್ಯಮಂತ್ರಿ, ಬಿಜೆಪಿ ಮುಖಂಡ ಎಸ್‌.ಎಂ.ಕೃಷ್ಣ ರಾಜಕೀಯ ನಿವೃತ್ತಿ ವಿಚಾರ: ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಕಾಂಗ್ರೆಸ್

ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರನ್ನು ಬೀದಿಗೆ ತಂದು ಅವಮಾನಿಸಿದ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ ಎಂದು ಕಾಂಗ್ರೆಸ್‌ ಆರೋಪಿಸಿದೆ.

ಕಾಂಗ್ರೆಸ್‌ನಲ್ಲಿ ಅಗ್ರಗಣ್ಯ ನಾಯಕರಾಗಿದ್ದ ಹಿರಿಯ ನಾಯಕ ಕೃಷ್ಣ ಅವರ ಬಳಿ ಆಡಳಿತಾತ್ಮಕ ಸಲಹೆ ಕೇಳುವ ಮನಸ್ಸು ಬಿಜೆಪಿಗರಿಗೆ ಇಲ್ಲ. ಅವರ ಸಲಹೆ ಬಿಜೆಪಿಗೆ ಬೇಕಾಗಿಯೂ ಇಲ್ಲ. ಬಿಜೆಪಿಯ ಸಿದ್ಧಾಂತಗಳು ಕೃಷ್ಣರಿಗೆ ಪಥ್ಯವಾದವೇ ಅಥವಾ ಕೃಷ್ಣರೇ ಬಿಜೆಪಿಗೆ ಅಪಥ್ಯವಾದರೇ? ಎಂದು ಕಾಂಗ್ರೆಸ್‌ ತೀಕ್ಷ್ಣವಾಗಿ ಟ್ವೀಟ್ ಮಾಡಿದೆ.

ರಾಜಕೀಯದಿಂದ ನಿವೃತ್ತಿಯಾಗುತ್ತಿರುವುದಾಗಿ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕ ಎಸ್‌.ಎಂ.ಕೃಷ್ಣ ಅವರು ಜ.4ರಂದು ಘೋಷಿಸಿದ್ದರು.

Leave a Reply

Your email address will not be published. Required fields are marked *

error: Content is protected !!