ಇಂಟಕ್ ಯುವ ಘಟಕದ ಕಡಬ ತಾಲೂಕು ಅಧ್ಯಕ್ಷರಾಗಿ ಮಹಮ್ಮದ್ ಅಶ್ಪಾಕ್ ನೇಮಕ
ಕಡಬ: ಇಂಟಕ್ ಯುವ ಘಟಕದ ಕಡಬ ತಾಲೂಕು ಅಧ್ಯಕ್ಷರಾಗಿ ಮಹಮ್ಮದ್ ಅಶ್ಪಾಕ್ ಆಯ್ಕೆಯಾಗಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಕಾನೂನು ಮತ್ತು ಮಾಹಿತಿ ಹಕ್ಕುಗಳ ವಿಭಾಗದ ಉಪಾಧ್ಯಕ್ಷರಾದ ಡಾ.ಎಜೆ ಅಕ್ರಂ ಪಾಶಾ ಹಾಗೂ ಇಂಡಿಯನ್ ನ್ಯಾಶನಲ್ ಟ್ರೇಡ್ ಯೂನಿಯನ್ ಕಾಂಗ್ರೆಸ್ ಅಧ್ಯಕ್ಷ ಟಿ.ವೈ ಕುಮಾರ್ ಅವರು ಆದೇಶದ ಮೇರೆಗೆ ಈ ಆಯ್ಕೆ ನಡೆದಿದ್ದು ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಭಿಲಾಶ್ ಪಿ.ಕೆ ಅವರು ಶಿಫಾರಸ್ಸು ಮಾಡಿದ್ದರು.