ಸುಳ್ಯ: ಹೊಳೆಯಲ್ಲಿ ಮುಳುಗಿ ಇಬ್ಬರು ಮಕ್ಕಳು ಮೃತ್ಯು
ಸುಳ್ಯ: ಇಲ್ಲಿಗೆ ಸಮೀಪದ ಅಡೂರು ಎಂಬಲ್ಲಿ ಹೊಳೆಯಲ್ಲಿ ಮುಳುಗಿ ಇಬ್ಬರು ಮಕ್ಕಳು ಮೃತಪಟ್ಟ ಘಟನೆ ವರದಿಯಾಗಿದೆ.
ಮಕ್ಕಳು ನೀರಿನಲ್ಲಿ ಮುಳುಗಿದ ವಿಚಾರ ತಿಳಿದ ಸ್ಥಳೀಯರು ಅವರನ್ನು ಮೇಲೆತ್ತಿ ಆಸ್ಪತ್ರೆಗೆ ತಲುಪಿಸಿದರೂ ಅದಾಗಲೇ ಮಕ್ಕಳು ಮೃತಪಟ್ಟಿದ್ದರೆಂದು ತಿಳಿದುಬಂದಿದೆ.
ನಾಲ್ಕು ವರ್ಷದ ಮಕ್ಕಳಿಬ್ಬರು ಮನೆಯವರಿಗೆ ತಿಳಿಸದೆ ಹೊಳೆಗೆ ಬಂದಿದ್ದರೆನ್ನಲಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ