ಕರಾವಳಿ

ಉಪ್ಪಿನಂಗಡಿ: ನೆರೆ ಬಾಧಿತ ಪ್ರದೇಶಗಳಲ್ಲಿ ಎಸ್.ವೈ.ಎಸ್ ಇಸಾಬ ಕಾರ್ಯಕರ್ತರ ಕಾರ್ಯಾಚರಣೆ

ಪುತ್ತೂರು: ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಗೆ ಉಪ್ಪಿನಂಗಡಿ ಪರಿಸರದ ಮಠ, ಪಂಜಾಲ ಮತ್ತಿತರ ಕಡೆ ದಿಢೀರನೆ ಮಳೆ ನೆರೆ ವ್ಯಾಪಕವಾಗಿ ನುಗ್ಗಿ, ಹಲವು ಕುಟುಂಬಗಳು ಸಾಕಷ್ಟು ಸಂಕಷ್ಟಗಳನ್ನು ಅನುಭವಿಸುತ್ತಿರುವ ಬಗ್ಗೆ ವರದಿಯಾಗಿದ್ದು ನೆರೆ ನೀರಿಗೆ ಸಿಲುಕಿದ ಮನೆಗಳಿಂದ ಸಂತ್ರಸ್ತರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗುತ್ತಿದೆ.


ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಹಲವು ಮನೆಗಳು ಜಲಾವೃತಗೊಂಡ ವಿಷಯ ತಿಳಿದ ಉಪ್ಪಿನಂಗಡಿ ಝೋನ್ ವ್ಯಾಪ್ತಿಯ ಕೆ ಎಂ ಜೆ,ಎಸ್ ವೈ ಎಸ್,ಎಸ್ಸೆಸ್ಸೆಫ್ ಸಾಂತ್ವನ ಇಸಾಬದ ಸ್ವಯಂಸೇವಕರ ತಂಡ ಮಳೆಯನ್ನು ಲೆಕ್ಕಿಸದೆ ಬೆಳಗ್ಗಿನಿಂದಲೇ ಸಾಂತ್ವನ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ರಾಷ್ಟೀಯ ಹೆದ್ದಾರಿಗೂ ನೆರೆ ನೀರು ನುಗ್ಗಿದ್ದು ಸುಗಮ ವಾಹನ ಸಂಚಾರಕ್ಕೆ ಪೋಲಿಸ್ ಅಧಿಕಾರಿಗಳೊಂದಿಗೆ ಕೈ ಜೋಡಿಸುತ್ತಿದ್ದಾರೆ.
ಇಸಾಬದ ಕಾರ್ಯಕರ್ತರ ಈ ಸೇವೆ ಪ್ರಶಂಸೆಗೆ ಪಾತ್ರವಾಗಿದೆ.

Leave a Reply

Your email address will not be published. Required fields are marked *

error: Content is protected !!