ಕರಾವಳಿಕ್ರೈಂ

ಸುಳ್ಯ ಪಯಸ್ವಿನಿ ನದಿಯಲ್ಲಿ ಮುಳುಗಿ ವ್ಯಕ್ತಿ ಮೃತ್ಯು



ಸುಳ್ಯ: ಅರಂಬೂರು ಸೇತುವೆ ಬಳಿ ಪಯಸ್ವಿನಿ ನದಿಯಲ್ಲಿ ‌ ಮಡಿಕೇರಿ ಮೂಲದ ವ್ಯಕ್ತಿಯೊಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಇಂದು ವರದಿಯಾಗಿದೆ.

ಮೃತಪಟ್ಟ ವ್ಯಕ್ತಿ ಮಡಿಕೇರಿ ಮದೆನಾಡು ಮೂಲದ ವೆಂಕಟ್ರಮಣ (65.ವ) ಎಂದು ಗುರುತಿಸಲಾಗಿದೆ.

ಅರಂಬೂರು ತನ್ನ ಸಂಬಂಧಿಕರ ಮನೆಗೆಂದು ಬಂದ ವ್ಯಕ್ತಿ ಭಜನಾ ಮಂದಿರದ ಬಳಿಯ ಹೊಳೆಯಲ್ಲಿ ಸ್ನಾನಕ್ಕೆಂದು ಇಳಿದಿದ್ದು ಈ ವೇಳೆ ಅವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.


ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳದವರು ಬೋಟ್ ಬಳಸಿ ಸುಮಾರು ಎರಡುವರೆ ಗಂಟೆಗಳ ಕಾಲ ಹುಡುಕಾಟ ನಡೆಸಿದರು ಶವ ಪತ್ತೆಯಾಗಿರಲಿಲ್ಲ. ಬಳಿಕ ಪೈಚಾರಿನ ಮುಳುಗು ತಜ್ಞರಾದ ಆರ್.ಬಿ.ಬಶೀರ್, ಅಬ್ಬಾಸ್ ಶಾಂತಿನಗರ, ಲತೀಫ್ ಬೊಳುಬೈಲು,ಶಿಯಾಬ್, ಲತೀಫ್ ಟಿ.ಎ ರವರ ತಂಡ ಆಗಮಿಸಿ ನದಿಯಲ್ಲಿ ಮುಳುಗಿ ಶವದ ಪತ್ತೆ ಕಾರ್ಯ ಮಾಡಿದರು.

ಮೃತರು ವೆಂಕಟ್ರಮಣ ಮೂಲ್ಯ, ಪತ್ನಿ ಶ್ರೀಮತಿ ಶಾಂತಿ, ಪುತ್ರ ಅನಿಲ್ ಕುಮಾರ್, ಶ್ರೀಮತಿ ಅನಿತಾ ಮಹೇಶ್ ಹಾಗೂ ಸಹೋದರ ಬಾಲಕೃಷ್ಣ, ಸಹೋದರಿ ಜಾನಕಿ, ಶಾರದ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!