ದ್ವೇಷಪೂರಿತ ಭಾಷಣ: ಕಾಜಲ್ ಹಿಂದೂಸ್ಥಾನಿಗೆ 14 ದಿನಗಳ ನ್ಯಾಯಾಂಗ ಬಂಧನ
ರಾಮ ನವಮಿಯಂದು ದ್ವೇಷಪೂರಿತ ಭಾಷಣ ಮಾಡಿ ಉನಾ ಪಟ್ಟಣದಲ್ಲಿ ಕೋಮು ಘರ್ಷಣೆಗೆ ಕಾರಣವಾದ ಆರೋಪದ ಮೇಲೆ ಬಲಪಂಥೀಯ ಕಾರ್ಯಕರ್ತೆ ಕಾಜಲ್ ಹಿಂದೂಸ್ಥಾನಿ ಅವರನ್ನು ಬಂಧಿಸಿದ ನಂತರ ಗುಜರಾತ್‌ನ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ತಿಳಿದು ಬಂದಿದೆ.

ಮಾ.30ರಂದು ರಾಮ ನವಮಿ ಹಬ್ಬದಂದು ಹಿಂದೂಸ್ಥಾನಿ ಮಾಡಿದ ಭಾಷಣ ಎ.1ರಂದು ರಾತ್ರಿ ಉನಾ ಪಟ್ಟಣದಲ್ಲಿ ಕೋಮು ಘರ್ಷಣೆಗೆ ಕಾರಣವಾಗಿತ್ತು.