ತೀವ್ರ ಕುತೂಹಲ ಮೂಡಿಸಿದ್ದ ಸುಳ್ಯ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಜಿ.ಕೃಷ್ಣಪ್ಪ ಕಣಕ್ಕೆ
ಸುಳ್ಯ ವಿಧಾನ ಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಪೈಕಿ ಎರಡು ಹೆಸರು ಪ್ರಬಲವಾಗಿ ಕೇಳಿ ಬಂದಿದ್ದು ಇದೀಗ ಆ ಕುತೂಹಲಕ್ಕೆ ಕಾಂಗ್ರೆಸ್ ತೆರೆ ಎಳೆದಿದೆ. ಜಿ. ಕೃಷ್ಣಪ್ಪ ಹೆಸರನ್ನು ಕಾಂಗ್ರೆಸ್ ಹೈಕಮಾಂಡ್ ಫೈನಲ್ ಮಾಡಿದೆ.

ನಂದಕುಮಾರ್ ಹೆಸರು ಈ ಬಾರಿ ಪಕ್ಕಾ ಎನ್ನುವ ಸುದ್ದಿ ಸುಳ್ಯ ಕ್ಷೇತ್ರದಲ್ಲಿ ಹರಿದಾಡುತ್ತಿರುವ ಮಧ್ಯೆಯೇ ಜಿ. ಕೃಷ್ಣಪ್ಪ ರವರು ಧಿಡೀರ್ ದೆಹಲಿಗೆ ವಿಮಾನ ಹತ್ತಿರುವ ಬಗ್ಗೆ ಎಲ್ಲೆಡೆ ಸುದ್ದಿಯಾಗಿತ್ತು. ಇದೀಗ ಸುಳ್ಯ ಕ್ಷೇತ್ರದಿಂದ ಕೊನೆಗೂ ಕೃಷ್ಣಪ್ಪ ಅವರನ್ನೇ ಕಾಂಗ್ರೆಸ್ ಕಣಕ್ಕಿಳಿಸಲು ಘೋಷಣೆ ಮಾಡಿದೆ.
ಕರ್ನಾಟಕ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಮೊದಲ ಪಟ್ಟಿ ಬಿಡುಗಡೆ ಮಾಡಲಾಗಿದ್ದು 124 ಸ್ಥಾನಗಳಿಗೆ ಟಿಕೆಟ್ ಘೋಷಣೆಯಾಗಿದೆ.