ನಾನು ಬಿಜೆಪಿಯಲ್ಲಿದ್ದಾಗಲೂ ಯಾರನ್ನೂ ದ್ವೇಷಿಸಿಲ್ಲ, ನನ್ನ ಬಗ್ಗೆ ತಪ್ಪು ಕಲ್ಪನೆ ಇಟ್ಟುಕೊಳ್ಳಬೇಡಿ-ಅಶೋಕ್ ರೈ
ಪುತ್ತೂರು: ನಾನು ಬಿಜೆಪಿಯಲ್ಲಿ 20 ವರ್ಷ ಕೆಲಸ ಮಾಡಿದ್ದೇನೆ. ನಾನು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದಾಗ ಕೆಲ ಮುಸ್ಲಿಂ ಬಂಧುಗಳು ನನ್ನ ಬಗ್ಗೆ ತಪ್ಪು ಕಲ್ಪನೆ ಇಟ್ಟುಕೊಂಡಿದ್ದರು. ನಾನು ಬಿಜೆಪಿಯಲ್ಲಿದ್ದಾಗ 2200 ಮಂದಿ ಮುಸ್ಲಿಂ ಕುಟುಂಬಗಳಿಗೂ ನೆರವು ನೀಡಿದ್ದೇನೆ ಎಂದು ಕಾಂಗ್ರೆಸ್ ಮುಖಂಡ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಹೇಳಿದರು.
ಪಡುಮಲೆ ಮಖಾಂ ಆಂಡ್ ನೇರ್ಚೆ ಪ್ರಯುಕ್ತ ಹಮ್ಮಿಕೊಂಡಿದ್ದ ಸೌಹಾರ್ದ ಸಂಗಮದಲ್ಲಿ ಅವರು ಮಾತನಾಡಿದರು. ನಾನು ಬಿಜೆಪಿಯಲ್ಲಿದ್ದಾಗಲೂ ಯಾರನ್ನೂ ದ್ವೇಷಿಸಿಲ್ಲ, ಇನ್ನು ಮುಂದಕ್ಕೂ ದ್ವೇಷಿಸಲಾರೆ, ನನ್ನ ಬಗ್ಗೆ ಯಾರೂ ತಪ್ಪು ಕಲ್ಪನೆ ಇಟ್ಟುಕೊಳ್ಳಬೇಡಿ ಎಂದು ಅವರು ಹೇಳಿದರು.
ಧರ್ಮದ ಹೆಸರಿನಲ್ಲಿ ಸಂಘರ್ಷ ನಡೆಯುತ್ತಿದ್ದರೆ ನಮ್ಮ ದೇಶ ಎಂದಿಗೂ ಉದ್ದಾರವಾಗಲು ಸಾಧ್ಯವಿಲ್ಲ. ಧರ್ಮಗಳು ಶಾಂತಿಯನ್ನು ಕಲಿಸುತ್ತದೆ. ಧರ್ಮಗುರುಗಳು ಸಮಾಜವನ್ನು ಜೋಡಿಸುವ ಕೊಂಡಿಯಾಗಿ ಕೆಲಸ ಮಾಡಬೇಕು, ಹಿಂದೂ, ಮುಸ್ಲಿಂ, ಕ್ರೈಸ್ತ ಎನ್ನುವ ಬೇಧಭಾವ ಮರೆತು ನಾವೆಲ್ಲರೂ ಒಂದೇ ಎನ್ನುವ ದೃಷ್ಟಿಯಲ್ಲಿ ಅನ್ಯೋನ್ಯತೆಯಿಂದ ಜೀವನ ನಡೆಸಿದರೆ ಇಲ್ಲಿ ಯಾವುದೇ ಸಮಸ್ಯೆ ಉಂಟಾಗಲು ಸಾಧ್ಯವಿಲ್ಲ ಎಂದು ಅಶೋಕ್ ಕುಮಾರ್ ರೈ ಹೇಳಿದರು.