ಕುಂಬ್ರ: ರಿಕ್ಷಾದ ಹಿಂಬದಿಗೆ ಆಕ್ಟಿವಾ ಡಿಕ್ಕಿ-ಸವಾರನಿಗೆ ಗಾಯ
ಪುತ್ತೂರು: ಆಟೋ ರಿಕ್ಷಾ ಮತ್ತು ದ್ವಿಚಕ್ರ ವಾಹನ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಗಾಯಗೊಂಡಿರುವ ಘಟನೆ ಕುಂಬ್ರ ಸಮೀಪದ ಕೊಲ್ಲಾಜೆ ಅಮೈ ಎಂಬಲ್ಲಿ ಮಾ.19ರಂದು ಸಂಜೆ ನಡೆದಿದೆ.
ತಿಂಗಳಾಡಿಯಿಂದ ಕುಂಬ್ರ ಕಡೆಗೆ ಹೋಗುತ್ತಿದ್ದ ಆಕ್ಟಿವಾ ಕೊಲ್ಲಾಜೆ ಬಳಿ ರಿಕ್ಷಾದ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದ್ದು ಈ ವೇಳೆ ಆಕ್ಟಿವಾ ಪಲ್ಟಿಯಾಗಿ ಸವಾರ ಈಶ್ವರಮಂಗಲದ ಯತೀಶ್ ಎಂಬವರ ಮುಖ ಹಾಗೂ ಕಾಲಿಗೆ ಗಾಯವಾಗಿದೆ.
ಸಹ ಸವಾರ ಯಾವುದೇ ಗಾಯಗಳಿಲ್ಲದೇ ಪಾರಾಗಿದ್ದಾರೆ. ರಿಕ್ಷಾ ಚಾಲಕ ರಿಕ್ಷಾ ನಿಲ್ಲಿಸಲು ಹಠಾತ್ ಆಗಿ ಬ್ರೇಕ್ ಹಾಕಿದ ವೇಳೆ ಹಿಂದಿನಿಂದ ಬರುತ್ತಿದ್ದ ಆಕ್ಟಿವಾ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.