ತಂಗಿ ಕೈಯಲ್ಲಿದ್ದ ಪಿಸ್ತೂಲ್ ನಿಂದ ಹಾರಿದ ಗುಂಡು- 4 ವರ್ಷದ ಅಕ್ಕ ಸಾವು:
ಗುಂಡು ತುಂಬಿದ್ದ ಪಿಸ್ತೂಲ್ ಅನ್ನು ಮೂರು ವರ್ಷದ ಮಗುವೊಂದು ಆಟಿಕೆ ಎಂದು ಹಿಡಿದು ಟ್ರಿಗರ್ ಒತ್ತಿದ್ದರಿಂದ ಗುಂಡು ಹಾರಿ ನಾಲ್ಕು ವರ್ಷದ ಅವಳ ಅಕ್ಕ ಮೃತಪಟ್ಟಿರುವ ಘಟನೆ ಟೆಕ್ಸಾಸ್‌ನ ಮನೆಯೊಂದರಲ್ಲಿ ನಡೆದಿದೆ.
3 ವರ್ಷದ ಮಗು ಲೋಡ್ ಮಾಡಿದ್ದ ಸ್ವಯಂಚಾಲಿತ ಪಿಸ್ತೂಲ್ ತೆಗೆದುಕೊಂಡು ಆಟಿಕೆಯಂತೆ ಬಳಸಿದ್ದು ಪೋಷಕರಿಗೆ ಬಾರಿ ಗುಂಡು ಹಾರಿದ ಸದ್ದು ಕೇಳಿಸಿತ್ತು. ಅವರು ಕೊಠಡಿಗೆ ಧಾವಿಸಿ ಬಂದಾಗ ಇನ್ನೊಬ್ಬ ಬಾಲಕಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡಿತು. ತಕ್ಷಣ ಆಸ್ಪತ್ರೆಗೆ ಸಾಗಿಸಿದರೂ ಮಗು ಮೃತಪಟ್ಟಿತ್ತು.