ಸುಳ್ಯ: ಆಟೋ ರಿಕ್ಷಾದಲ್ಲಿ ಅಕ್ರಮ ಮದ್ಯ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ರಿಕ್ಷಾ ಸಮೇತ ವಶಕ್ಕೆ ಪಡೆದ ಪೊಲೀಸರು
ಸುಳ್ಯ ಕಡೆಯಿಂದ ಮರ್ಕಂಜ ಕಡೆಗೆ ಬರುತ್ತಿದ್ದ ರಿಕ್ಷಾವೊಂದರಲ್ಲಿ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿರುವ ಮಾಹಿತಿ ಪಡೆದ ಸುಳ್ಯ ಪೋಲೀಸರು ದಾಳಿ ನಡೆಸಿ ರಿಕ್ಷಾ ಹಾಗೂ ಮದ್ಯ ವನ್ನು ವಶಕ್ಕೆ ಪಡೆದಿರುವುದಾಗಿ ತಿಳಿದು ಬಂದಿದೆ.

ಮಾರ್ಚ್ 7ರಂದು ಸಂಜೆ ದಾಳಿ ಮಾಡಿರುವ ಪೋಲೀಸರು ಮರ್ಕಂಜದ ದೋಳ ಕರುಣಾಕರ ಎಂಬವರನ್ನು ಹಾಗೂ ಅವರ ರಿಕ್ಷಾವನ್ನು ಪೋಲೀಸರು ವಶಕ್ಕೆ ಪಡೆದಿರುವುದಾಗಿದೆ.
ಸುಳ್ಯ ವೃತ್ತ ನಿರೀಕ್ಷಕ ಸಿ ಎಂ ರವೀಂದ್ರ ರವರ ಮಾರ್ಗದರ್ಶನದಲ್ಲಿ ನಡೆದ ಈ ದಾಳಿಯಲ್ಲಿ ಸುಳ್ಯ ಪೊಲೀಸ್ ಠಾಣಾ ಅಪರಾಧ ವಿಭಾಗದ ಎಸ್ ಐ ಶಾಹಿದ್ ಅಫ್ರಿದಿ, ಸಿಬ್ಬಂದಿಗಳಾದ ಮನು ಗೌಡ, ಸುನಿಲ್, ಹೈದರಲಿ, ಸಂತೋಷ್ ನಾಯಕ್ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.