ಪುತ್ತೂರು: ಎಸ್.ಡಿ.ಪಿ.ಐ ಮಹಿಳಾ ಘಟಕದಿಂದ ಮಾದರಿ ಮಹಿಳಾ ದಿನಾಚರಣೆ: ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

ಪುತ್ತೂರು: ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಎಸ್.ಡಿ.ಪಿ.ಐ ಪುತ್ತೂರು ವಿಧಾನಸಭಾ ಕ್ಷೇತ್ರದ ಮಹಿಳಾ ಘಟಕದ ವತಿಯಿಂದ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸುವ ಮೂಲಕ ಮಾದರಿಯಾಗಿ ಆಚರಿಸಲಾಯಿತು.

ವಿಮೆನ್ಸ್ ಇಂಡಿಯಾ ಮೂವ್‌ಮೆಂಟ್ ರಾಜ್ಯ ಪ್ರ.ಕಾರ್ಯದರ್ಶಿ ನಶ್ರಿಯಾ ಬೆಳ್ಳಾರೆ, ಪುತ್ತೂರು ಮಹಿಳಾ ಚುನಾವಣಾ ಉಸ್ತುವಾರಿ ಝಾಹಿದ ಸಾಗರ್, ನಗರ ಸಭಾ ಸದಸ್ಯೆ ಝೊಹರಾ ಬನ್ನೂರು, ವಿಟ್ಲ ಪಟ್ಟಣ ಪಂಚಾಯತ್ ಸದಸ್ಯೆ ಶಕೀರಾ ಅಬ್ದುಲ್ಲಾ, ರಝಿಯಾ ಉಕ್ಕುಡ, ನಸೀರಾ ಮುಕ್ವೆ, ಫತಹಿಯ್ಯಾ ಸಹಿತ ಹಲವು ಮಹಿಳೆಯರು ಉಪಸ್ಥಿತರಿದ್ದರು. ಡಾ.ಆಶಾ ಕೃತಜ್ಞತೆ ಸಲ್ಲಿಸಿದರು
