ಪುತ್ತೂರು: ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ರಿಕ್ಷಾ ಡಿಕ್ಕಿ-ಆಸ್ಪತ್ರೆಗೆ ದಾಖಲು
ಪುತ್ತೂರು:ರಸ್ತೆ ದಾಟುತ್ತಿದ್ದ ವ್ಯಕ್ತಿಯೋರ್ವರಿಗೆ ಅಟೋ ರಿಕ್ಷಾವೊಂದು ಡಿಕ್ಕಿಯಾದ ಘಟನೆ ಎಂ.ಟಿ ರಸ್ತೆಯಲ್ಲಿ ಮಾ.4ರಂದು ನಡೆದಿದೆ.
ಕೂಲಿ ಕಾರ್ಮಿಕ ನರಿಮೊಗರು ನಿವಾಸಿ ಕಿರಣ್ ಪ್ರಸಾದ್ (28ವ) ಗಾಯಗೊಂಡವರು.
ಬೈಕ್‌ನಲ್ಲಿ ಬಂದು ಎಂಟಿ.ರಸ್ತೆಯಲ್ಲಿ ಬೈಕ್ ನಿಲ್ಲಿಸಿ ರಸ್ತೆ ದಾಟುತ್ತಿದ್ದ ವೇಳೆ ಆಟೋ ರಿಕ್ಷಾವೊಂದು ಅವರಿಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಅವರ ಕುತ್ತಿಗೆಗೆ ತೀವ್ರ ಗಾಯವಾಗಿದ್ದು, ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.