ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರಿಂದ ಬಿಲ್ಲವ ಸಮುದಾಯಕ್ಕೆ ಅವಮಾನ- ಅಮಳ ರಾಮಚಂದ್ರ ಆರೋಪ
ನಾರಾಯಣ ಗುರುಗಳ ಅಭಿಮಾನಿಗಳ ವಿರೋಧದ ನಡುವೆಯೂ ರೋಹಿತ್ ಚಕ್ರತೀರ್ಥರನ್ನು ವೇಣೂರು ಬ್ರಹ್ಮಕಲಶಕ್ಕೆ ಕರೆಸುವ ಮೂಲಕ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜಾರವರು ಬಿಲ್ಲವ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ, ಅಮಳ ರಾಮಚಂದ್ರ ಆರೋಪಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಎಲ್ಲ ರಂಗದಲ್ಲೂ ಕೇಸರೀಕರಣ ಆಗುತ್ತಿದೆ. ಪಠ್ಯಪುಸ್ತಕದಲ್ಲಿ ಕೇಸರೀಕರಣವಾಗಿದೆ ಎಂದರು.
ರೋಹಿತ್ ಚಕ್ರತೀರ್ಥರು ಪಠ್ಯಪುಸ್ತಕ ಪರಿಷ್ಕರಣೆಯ ಅಧ್ಯಕ್ಷರಾಗಿ ಪಠ್ಯಪುಸ್ತಕ ಪರಿಷ್ಕರಣೆ ಮೇಲೆ ಲೋಪಗಳನ್ನು ಮಾಡಿದ್ದು ನಾರಾಯಣ ಗುರುಗಳ ಸಂದೇಶವನ್ನು ಪುಸ್ತಕದಿಂದ ತೆಗೆದು ಹಾಕಿದ್ದಾರೆ. ಅವರ ವಿರುದ್ಧ ಅನೇಕ ಪ್ರತಿಭಟನೆಗಳು ಆಗಿದೆ. ಅಂತಹ ಗಂಭೀರ ಆರೋಪ ಇರುವ ವ್ಯಕ್ತಿಯನ್ನು ಎಲ್ಲರ ವಿರೋಧದ ನಡುವೆ ದೇವಸ್ಥಾನದ ಕಾರ್ಯಕ್ರಮಕ್ಕೆ ಕರೆ ತಂದಿರೋದು ಬಿಲ್ಲವ ಸಮುದಾಯಕ್ಕೆ ಹರೀಶ್ ಪೂಂಜ ಮಾಡಿದ ಅವಮಾನ ಎಂದು ಅಮಲ ರಾಮಚಂದ್ರ ತಿಳಿಸಿದ್ದಾರೆ.