ಇಂದು ಬೆಳಿಯೂರುಕಟ್ಟೆ ಮಂಜ ದರ್ಗಾ ಶರೀಫ್ ಉರೂಸ್ ಸಮಾರಂಭಕ್ಕೆ ಚಾಲನೆ
ಬೆಳಿಯೂರುಕಟ್ಟೆ ಮಂಜ ದರ್ಗಾ ಶರೀಫ್ ಉರೂಸ್ ಸಮಾರಂಭ ಮಾ.2ರಿಂದ ಮಾ.4ರ ವರೆಗೆ ಮಂಜ ಅನ್ಸಾರಿಯ ಜುಮಾ ಮಸ್ಜಿದ್ ನ ಗೌರವಾಧ್ಯಕ್ಷರಾದ ಸಯ್ಯದ್ ಫಕ್ರುದ್ದೀನ್ ಹದ್ದಾದ್ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಮಾ.2ರಂದು ಬೆಳಿಗ್ಗೆ 9 ಗಂಟೆಗೆ ಅನ್ಸಾರಿಯಾ ಜಮಾಅತ್ ಕಮಿಟಿ ಮಂಜ ಇದರ ಅಧ್ಯಕ್ಷ ಉಮ್ಮರ್ ಫಾರೂಕ್ ಧ್ವಜಾರೋಹಣ ನೆರವೇರಿಸಲಿದ್ದು ಅಸರ್ ನಮಾಜಿನ ಬಳಿಕ ಮಹಮೂದುಲ್ ಫೈಝಿ ಓಲೆಮುಂಡೋವು ನೇತೃತ್ವದಲ್ಲಿ ಸ್ವಲಾತ್ ಮಜ್ಲಿಸ್ ನಡೆಯಲಿದೆ. ಮಗ್ರಿಬ್ ನಮಾಜಿನ ಬಳಿಕ ಮಂಜ ಮುಹ್ಯಿಸುನ್ನ ದರ್ಸ್ ವಿದ್ಯಾರ್ಥಿಗಳಿಂದ ಬುರ್ದಾ ಆಲಾಪನೆ ನಡೆಯಲಿದೆ.
ನಂತರ ಸಯ್ಯದ್ ಮುಝಮ್ಮಿಲ್ ತಂಙಳ್ ಕಾಸರಗೋಡು ದುವಾಶೀರ್ವಚನ ನೀಡಲಿದ್ದರು ಪರಿಯಲ್ತಡ್ಕ ಖತೀಬ್ ಹಸೈನಾರ್ ಫೈಝಿ ಉದ್ಘಾಟಿಸಲಿದ್ದಾರೆ ಎಂದು ಉರೂಸ್ ಕಮಿಟಿ ಅಧ್ಯಕ್ಷ ಯೂಸುಫ್ ಗೌಸಿಯ ಸಾಜ ತಿಳಿಸಿದ್ದಾರೆ.