ಮಗಳ ಮದುವೆ ಫೋಟೊ ಹಂಚಿಕೊಂಡು ಭಾವನಾತ್ಮಕ ಟ್ವೀಟ್ ಮಾಡಿದ ಶಹೀದ್ ಅಫ್ರಿದಿ
ಪುತ್ರಿ ಅನ್ಶಾ ಮತ್ತು ಪಾಕ್ ವೇಗದ ಬೌಲರ್ ಶಾಹೀನ್ ಅಫ್ರಿದಿ ಅವರ ವಿವಾಹದ ಚಿತ್ರವನ್ನು ಪಾಕಿಸ್ತಾನ ಕ್ರಿಕೆಟ್‌ನ ಮಾಜಿ ನಾಯಕ ಶಹೀದ್ ಅಫ್ರಿದಿ ಸಾಮಾಜಿಕ ಮಾಧ್ಯಮವಾದ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಶಾಹೀನ್ ಅಫ್ರಿದಿ ಮತ್ತು ಅನ್ಶಾ ಅವರ ವಿವಾಹ ಶುಕ್ರವಾರ ನಡೆದಿತ್ತು. ಪಾಕಿಸ್ತಾನ ತಂಡದ ನಾಯಕ ಬಾಬರ್ ಅಝಮ್, ಸರ್ಫರಾಝ್ ಅಹ್ಮದ್, ಫಖರ್ ಝಮಾನ್, ಶದಬ್ ಖಾನ್ ಸೇರಿದಂತೆ ಪಾಕಿಸ್ತಾನದ ಹಲವು ಆಟಗಾರರು ಮದುವೆಯಲ್ಲಿ ಭಾಗವಹಿಸಿದ್ದರು.

ಮಗಳ ವಿವಾಹದ ಫೋಟೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಶಾಹೀದ್ ಅಫ್ರಿದಿ ‘ಮಗಳೆಂದರೆ ಉದ್ಯಾನದ ಅತ್ಯಂತ ಸುಂದರವಾದ ಹೂವು, ಆ ಹೂ ಆಶೀರ್ವಾದಗಳೊಂದಿಗೆ ಅರಳಿರುತ್ತದೆ. ನಿಮ್ಮ ನಗು, ನೀವು ಕಾಣುವ ಕನಸು ಮತ್ತು ನಿಮ್ಮ ಹೃದಯದ ಪ್ರೀತಿಯೇ ಮಗಳು. ಅಪ್ಪನಾಗಿ, ನಾನು ನನ್ನ ಮಗಳನ್ನು ನಿಖಾದಲ್ಲಿ ಶಾಹೀನ್ ಅಫ್ರಿದಿಗೆ ನೀಡಿದ್ದೇನೆ. ಅವರಿಬ್ಬರಿಗೆ ಅಭಿನಂದನೆಗಳು’ ಎಂದು ಅಫ್ರಿದಿ ಬರೆದುಕೊಂಡಿದ್ದಾರೆ.