ನರಿಮೊಗರು: ಜಗತ್ತು ಭಾರತದತ್ತ ತಿರುಗಿ ನೋಡಲು ಕಾಂಗ್ರೆಸ್ಸಿನ ಕೊಡುಗೆಯೇ ಕಾರಣ-ದಿವ್ಯಪ್ರಭಾ ಗೌಡ
ಪುತ್ತೂರು: ಜಗತ್ತು ಭಾರತದತ್ತ ತಿರುಗಿ ನೋಡಲು ಕಾಂಗ್ರೆಸ್ಸಿನ ಕೊಡುಗೆಯೇ ಕಾರಣ ಎಂದು ರಾಜ್ಯ ಸಮಾಜ ಕಲ್ಯಾಣ ಮಂಡಳಿಯ ಮಾಜಿ ಅಧ್ಯಕ್ಷೆ ದಿವ್ಯಪ್ರಭಾ ಗೌಡ ಚಿಲ್ತಡ್ಕ ಹೇಳಿದರು.
ಜ.15ರಂದು ಇಂಡಿಯನ್ ಯೂತ್ ಕಾಂಗ್ರೆಸ್ ನರಿಮೊಗರು-ಪುರುಷರಕಟ್ಟೆ ಇದರ ಆಶ್ರಯದಲ್ಲಿ ನರಿಮೊಗರು ಮೈದಾನದಲ್ಲಿ ನಡೆದ ಕ್ರಿಕೆಟ್ ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಕಾಂಗ್ರೆಸ್ ಈ ದೇಶಕ್ಕೆ ಅಪಾರ ಕೊಡುಗೆ ಕೊಟ್ಟಿದ್ದು ದೇಶದ ಜನತೆಗೆ ಉದ್ಯೋಗ, ಶಿಕ್ಷಣ ಕೊಟ್ಟ ಕೀರ್ತಿ ಕಾಂಗ್ರೆಸಿಗೆ ಸಲ್ಲುತ್ತದೆ. ಅಂತಹ ಕಾಂಗ್ರೆಸ್ಸಿನ ಕಾರ್ಯಕರ್ತೆ ಎನ್ನಲು ನನಗೆ ಹೆಮ್ಮೆಯಾಗುತ್ತಿದೆ ಎಂದು ಅವರು ಹೇಳಿದರು.
ರಾಹುಲ್ ಗಾಂಧಿಯವರು ಭಾರತ ಜೋಡೋ ಯಾತ್ರೆಯ ಮುಖಾಂತರ ಯುವ ಜನತೆಯನ್ನು ಸಂಘಟಿಸುತ್ತಿದ್ದು ಭವಿಷ್ಯದ ಸದೃಢ ಭಾರತಕ್ಕಾಗಿ ಭದ್ರ ಬುನಾದಿಯನ್ನು ಹಾಕುತ್ತಿದ್ದಾರೆ. ದೇಶದ ನಿಜವಾದ ಅಭಿವೃದ್ಧಿ ಅದು ಕಾಂಗ್ರೆಸ್ ನಿಂದ ಮಾತ್ರ ಸಾಧ್ಯ ಎಂದು ದಿವ್ಯ ಪ್ರಭಾ ಹೇಳಿದರು.
ವೇದಿಕೆಯಲ್ಲಿ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.