ಮುಂಡೂರು: ಅಶ್ರಫ್ ಪಟ್ಟೆ ಅವರಿಗೆ ಹಲ್ಲೆ ಪ್ರಕರಣ: 10 ಮಂದಿಯ ವಿರುದ್ಧ ಪ್ರಕರಣ ದಾಖಲು
ಪುತ್ತೂರು: ಮುಂಡೂರು ಪಟ್ಟೆ ನಿವಾಸಿ ಅಶ್ರಫ್ ಪಟ್ಟೆ ಅವರಿಗೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ 10 ಮಂದಿ ವಿರುದ್ಧ ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಜ್ಜಿಕಟ್ಟೆ ನಿವಾಸಿ ಇಬ್ರಾಹಿಂ ಸಂತೋಷ್, ಉಸ್ಮಾನ್ ಸಂತೋಷ್, ಹಸೈನಾರ್ ಸಂತೋಷ್, ಮುಸ್ತಾಫ ಸಂತೋ಼ಷ್, ಇಬ್ರಾಹಿಂ ಮುಲಾರ್, ಅಶ್ರಫ್ ಮುಲಾರ್, ಸುಲೈಮಾನ್ ಮುಲಾರ್, ಮುತ್ತಬ್ಬ ಯಾನೆ ಮುಸ್ತಫ, ಅಶೀಫ್ ಅಜಲಾಡಿ,ರೌವುಫ್ ಅಜ್ಜಿಕಟ್ಟೆ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.
ಇವರುಗಳು ಅಕ್ರಮ ಪ್ರವೇಶ ಮಾಡಿ ಪಿರ್ಯಾದಿದಾರರು ಹಾಕಿದ ಬೇಲಿಯನ್ನು ತೆಗೆದು ನಾಶ ಮಾಡಿ, ಅವಾಚ್ಯ ಶಬ್ದಗಳಿಂದ ಬೈಯ್ದು, ಹಲ್ಲೆ ನಡೆಸಿದ್ದು, ಫಿರ್ಯಾದಿದಾರರನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿರುತ್ತಾರೆ.
ಹಲ್ಲೆಗೊಳಗಾದ ಫಿರ್ಯಾದಿದಾರರನ್ನು ಪತ್ನಿ ಮತ್ತು ಇತರರು ಪುತ್ತೂರು ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ, ಅಲ್ಲಿನ ವೈಧ್ಯರು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಅಂಬುಲೇನ್ಸ್ ವಾಹನದಲ್ಲಿ ಮಂಗಳೂರು ಇಂಡಿಯನ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿನ ವೈಧ್ಯರು ಫಿರ್ಯಾದಿದಾರರನ್ನು ಪರೀಕ್ಷಿಸಿ ಒಳರೋಗಿಯಾಗಿ ದಾಖಲು ಮಾಡಿಕೊಂಡಿರುತ್ತಾರೆ.
ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣಾ CR.NO 11-2023 ಕಲಂ: 143,147,148,447,427,504,323,324,506,149 ಯಂತೆ ಪ್ರಕರಣ ದಾಖಲಾಗಿರುತ್ತದೆ.