ಕರಾವಳಿಜಿಲ್ಲೆ

ಕಡಬ: ತಾಯಿ-ಮಗು ನಾಪತ್ತೆ



ಕಡಬ: ರಾಮಕುಂಜ ಗ್ರಾಮದ ನೀರಾಜೆಯ ಮಹಿಳೆಯೋರ್ವರು ತನ್ನ ಮಗುವಿನ ಜೊತೆ ನಾಪತ್ತೆಯಾಗಿರುವ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನೀರಾಜೆ ನಿವಾಸಿ ಮುನೀರ್ ಎಂಬವರ ಪತ್ನಿ ನೇಹಾ(26) ಮತ್ತು ಪುತ್ರ ಮುಹಮ್ಮದ್ ನಿಹಾಲ್ (4) ನಾಪತ್ತೆಯಾದವರು.


ಮುನೀರ್ ಪತ್ನಿ, ಮಗು ಜೊತೆ ಮೂರು ತಿಂಗಳ ಹಿಂದೆ ಬೆಂಗಳೂರಿಗೆ ಕೆಲಸಕ್ಕೆಂದು ತೆರಳಿದ್ದವರು ಡಿ.25ರಂದು ಮುನೀರ್ ಒಬ್ಬರೇ ಮನೆಗೆ ವಾಪಸ್ಸಾಗಿದ್ದಾರೆ. ಪತ್ನಿ, ಮಗು ಬಗ್ಗೆ ವಿಚಾರಿಸಿದಾಗ ಎರಡು ದಿನಗಳಲ್ಲಿ ಬರುವುದಾಗಿ ತಿಳಿಸಿದ್ದರೆನ್ನಲಾಗಿದೆ.

ಡಿ.30ರಂದು ಮುನೀರ್ ನೇಣುಬಿಗಿದು ಆತ್ಮಹತ್ಯೆಗೆ ಯತ್ನಿಸಿದ್ದು, ಈ ವೇಳೆ ಸ್ಥಳೀಯರು ರಕ್ಷಿಸಿದ್ದಾರೆ. ಜ.3ರಂದು ಮುನೀರ್ ಪುನಃ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಮಂಗಳೂರಿನ ಸರಕಾರಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ನಡುವೆ ನೇಹಾ ಹಾಗೂ ನಿಹಾಲ್ ದೂರವಾಣಿ ಕರೆಗೂ ಸಿಗದೆ, ಸಂಬಂಧಿಕರ ಮನೆಯಲ್ಲೂ ಇರದೆ ನಾಪತ್ತೆಯಾಗಿರುವುದಾಗಿ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!